ಭಾಗಮಂಡಲ, ಮೇ 18: ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ತಾ. 20ರಂದು ಕ್ಷೇತ್ರ ತಂತ್ರಿಯವರಾದ ಬ್ರಹ್ಮಶ್ರೀ. ವೇ. ಮೂ. ನಿಲೇಶ್ವರ ಪದ್ಮನಾಭ ತಂತ್ರಿಯವರ ಉಪಸ್ಥಿತಿಯಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಜರುಗಲಿದೆ. ತಾ. 21 ರಿಂದ 24ರವರೆಗೆ ಶ್ರೀ ಕ್ಷೇತ್ರ ತಲಕಾವೇರಿ ಯಲ್ಲಿ ಕೇರಳದ ಪಯ್ಯನೂರಿನ ಎ.ವಿ. ನಾರಾಯಣ ಪೊದುವಾಳ್ ಮತ್ತು ತಂಡದವರಿಂದ ಅಷ್ಟಮಂಗಲ ಪ್ರಶ್ನೆ ಏರ್ಪಡಿಸಲಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ತಿಳಿಸಿದ್ದಾರೆ.