ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಬಾರಿಯೂ ಸಂವಿಧಾನಕ್ಕನು ಗುಣವಾಗಿ ಚುನಾವಣೆಗಳು ನಡೆಯುತ್ತವೆ. ಜನಪ್ರತಿನಿಧಿಗಳು ಆರಿಸಿ ಬರುತ್ತಾರೆ. ಆದರೆ ಜನರ ಅನೇಕ ಕುಂದು ಕೊರತೆಗಳು, ಬೇಡಿಕೆಗಳು ಬಗೆ ಹರಿಯದೇ ಉಳಿಯು ತ್ತಿರುವದನ್ನೂ ನಾವು ಕಾಣುತ್ತಿದ್ದೇವೆ. ಕೆಲವು ಸಮಸ್ಯೆಗಳು ಶಾಸಕರುಗಳ ಗಮನಕ್ಕೆ ಬಾರದೆಯೂ ಉಳಿದಿರ ಬಹುದು. ಜಿಲ್ಲೆಯಮಟ್ಟಿಗೆ ಹೇಳುವ ದಾದರೆ ಕಳೆದ ಎರಡು ದಶಕಗ ಳಿಂದಲೂ ಜನರ ಭಾವನೆಗಳಿಗೆ ಸ್ಪಂದಿಸುವ ಶಾಸಕರುಗಳೇ ಆರಿಸಿ ಬಂದಿದ್ದಾ ರಾದರೂ ಜಿಲ್ಲೆಯಿನ್ನೂ ಸಮಸ್ಯೆ ಗಳಿಂದ ಹೊರ ಬಂದಿಲ್ಲ. ಕುಡಿಯುವ ನೀರು, ರಸ್ತೆ ಸಂಪರ್ಕ, ವಿದ್ಯುತ್ ಅವ್ಯವಸ್ಥೆ ಹೀಗೆ ಜನರ ಹತ್ತು ಹಲವು ಬೇಡಿಕೆಗಳು ಈಡೇರದೇ ಉಳಿದಿರ ಬಹುದು. ಜಿಲ್ಲೆಯ ಯಾವ ಪ್ರದೇಶದಲ್ಲಿ ಅಭಿವೃದ್ಧಿ ಕುಂಠಿತ ವಾಗಿದೆ. ಆಗಬೇಕಾದ ಕೆಲಸ ಕಾರ್ಯ ಗಳೇನು ಎಂಬದನ್ನು ಜನರು ಬರೆದು ತಿಳಿಸಿದಲ್ಲಿ ಸಾರ್ವಜನಿಕರ ಹಿತದೃಷ್ಟಿ ಯಿಂದ ಅದನ್ನು ‘ಶಕ್ತಿ’ಯಲ್ಲಿ ಪ್ರಕಟಿಸುವ ಮೂಲಕ ಶಾಸಕರ ಗಮನ ಸೆಳೆಯಲಾಗುವದು. ನಿಮ್ಮ ಶಾಸಕ ರಿಂದ ನೀವೇನು ಬಯಸುತ್ತೀರಿ ಎಂಬದನ್ನು ಸಾರ್ವಜನಿಕರು ತಾ. 31 ರೊಳಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದಾಗಿದೆ.
ಸಂಪಾದಕರು
‘ಶಕ್ತಿ’
ಕೈಗಾರಿಕಾ ಬಡಾವಣೆ, ಮಡಿಕೇರಿ