ಕುಶಾಲನಗರ, ಮೇ 19: ಕುಶಾಲನಗರ ಮಾರುಕಟ್ಟೆ ಬಳಿ ಹೆದ್ದಾರಿ ರಸ್ತೆ ಬದಿಯಲ್ಲಿ ಖಾಸಗಿ ಸಂಸ್ಥೆ ಮೂಲಕ ಅಕ್ರಮವಾಗಿ ನಿರ್ಮಿಸುತ್ತಿದ್ದ 3 ಅಂಗಡಿ ಮಳಿಗೆಗಳನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳು ತೆರವುಗೊಳಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ನೇತೃತ್ವದಲ್ಲಿ ಮುಂಜಾನೆ ಕಾರ್ಯಾಚರಣೆ ನಡೆಸಿದ ಪಂಚಾಯಿತಿ ಪೌರಕಾರ್ಮಿಕ ಸಿಬ್ಬಂದಿ ವರ್ಗದವರು ಪಂಚಾಯಿತಿಯಿಂದ ಅನುಮತಿ ಪಡೆದುಕೊಳ್ಳದೆ ನಿರ್ಮಿಸುತ್ತಿದ್ದ ಅಂಗಡಿ ಮಳಿಗೆಗಳನ್ನು ಕೆಡವಲಾಯಿತು.
ಕಾರ್ಯಾಚರಣೆ ಸಂದರ್ಭ ದಫೇದಾರ್ ಕುಮಾರ್, ಸಿಬ್ಬಂದಿಗಳಾದ ಗಣೇಶ್, ಸುರೇಶ್ ಬಾಬು, ಬಣ್ಣಾರಿ ಮತ್ತಿತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.