ಮಡಿಕೇರಿ, ಮೇ 18: ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬೂರು ನಿವಾಸಿ, ನಂದ ಪೂಜಾರಿ (24) ಎಂಬಾತ ತಾ. 6 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಬಳಿಕ ಮೃತನ ಪತ್ನಿ ಭವ್ಯ (22) ಎಂಬಾಕೆ ಕಾಣೆಯಾಗಿರುವ ಕುರಿತು ಪೊಲೀಸರಿಗೆ ಪುಕಾರಾಗಿದೆ.
ಕುಂಬೂರು ನಿವಾಸಿ, ತಿಮ್ಮಪ್ಪ ಪೂಜಾರಿ ಪುತ್ರ ನಂದ ಪೂಜಾರಿ, ಸೋಮವಾರಪೇಟೆ ಬಳಿ ಹಾನಗಲ್ಲುವಿನ ಬಂಧುವೊಬ್ಬರ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವದಾಗಿ ಹೇಳಲಾಗುತ್ತಿದೆ. ಈ ಸಂಬಂಧ ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆ ಬಳಿಕ ಹೊದ್ದೂರು ಗ್ರಾಮ ವಾಟೆಕಾಡು ಪೈಸಾರಿ ನಿವಾಸಿ ಬಿ.ಈ. ಕಿಶೋರ್ ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರು ನೀಡಿ, ತನ್ನ ತಂಗಿ ಸಣ್ಣ ಮಗುವನ್ನು ಬಿಟ್ಟು ಗಂಡನ ಮನೆಗೂ ತೆರಳದೆ ನಾಪತ್ತೆಯಾಗಿರುವದಾಗಿಯೂ, ಆಕೆಯನ್ನು ಪತ್ತೆ ಹಚ್ಚಿಕೊಡುವಂತೆಯೂ ಪುಕಾರಿನಲ್ಲಿ ತಿಳಿಸಿದ್ದಾರೆ.