ಮಡಿಕೇರಿ, ಮೇ 18: ಗಾಝಾದಲ್ಲಿ ಮುಗ್ಧ ಫ್ಯಾಲಿಸ್ತೇನಿಯರನ್ನು ಇಸ್ರೇಲ್ ಸೇನೆಯು ಹತ್ಯೆಗೈಯ್ಯುವದರೊಂದಿಗೆ 60ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 2000 ಮಂದಿ ಗಾಯಗೊಂಡಿದ್ದಾರೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಆರೋಪಿಸಿದೆ.
ಅಲ್ಲದೆ ಇಸ್ರೇಲ್ ಸೇನೆಗೆ ಅಮೇರಿಕಾ ನೆರವು ನೀಡುವದರೊಂದಿಗೆ ಮುಗ್ಧರ ಹತ್ಯೆಗೆ ಕುಮ್ಮಕ್ಕು ನೀಡಿದೆ ಎಂದು ಆರೋಪಿಸಿರುವ ಪಿ.ಎಫ್.ಐ. ಕಾರ್ಯಕರ್ತರು ಈ ಕೃತ್ಯ ಖಂಡಿಸಿ ನಗರದ ಇಂದಿರಾಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪಿ.ಎಫ್.ಐ ಜಿಲ್ಲಾಧ್ಯಕ್ಷ ಟಿ.ಎ. ಹ್ಯಾರೀಸ್, ನಗರಸಭಾ ಸದಸ್ಯ ಅಮೀನ್ ಮೊಯಿಸಿನ್ ಸೇರಿದಂತೆ ಸಂಘಟನೆ ಕಾರ್ಯಕರ್ತರು ಪಾಲ್ಗೊಂಡಿದ್ದರು.