ಚೆಟ್ಟಳ್ಳಿ, ಮೇ 18: ಕೊಡಗು ಈಗಾಗಲೇ ದೇಶಕ್ಕೆ ತನ್ನ ಮಡಿಲಿನಿಂದ ಎಲ್ಲ ಕ್ಷೇತ್ರದಲ್ಲೂ , ಹಾಗೂ ಎಲ್ಲ್ಲಾ ಪ್ರಮುಖ ರಂಗದಲ್ಲೂ ಮಿಂಚಿರುವ ಅನೇಕ ಸಾಧಕರನ್ನು ಕೊಡುಗೆಯಾಗಿ ನೀಡಿದೆ . ಈಗಾಗಲೇ ಕೊಡಗಿನ ಯುವಕರು ಪಾಶ್ಚಾತ್ಯ ಸಂಗೀತವಾದ ರಾಕ್ ಮ್ಯೂಸಿಕ್‍ನಲ್ಲಿ ಮುಂದೆ ಬಂದು ಸಾಧನೆ ಮಾಡುತ್ತಿರುವದು ಕೊಡಗಿಗೆ ಮತ್ತೊಂದು ಗರಿ ಅಂತಹ ಒಂದು ಅಪರೂಪದ ಪ್ರತಿಭೆಯು ಬಿದ್ದಾಟಂಡ ವೈಶಾಕ್ ಸೋಮಣ್ಣ.

ನಾಪೋಕ್ಲುವಿನ ಬಿದ್ದಾಟಂಡ ವೈಶಾಕ್ ಸೋಮಣ್ಣನು ಈಗಾಗಲೇ ಹಲವಾರು ಸಣ್ಣ ವೇದಿಕೆ ಕಾರ್ಯಕ್ರಮಗಳನ್ನು ನೀಡುತ್ತಾ ಜನರ ಪ್ರಶಂಶೆಗೆ ಪಾತ್ರನಾಗಿದ್ದಾನೆ .ತನ್ನ ಗಿಟಾರನ್ನು ಕೈಯಲ್ಲಿ ಹಿಡಿದು ನುಡಿಸಲು ಹೊರಟರೆ ಎಂತಹವರನ್ನು ಮಂತ್ರ ಮುಗ್ದನಾಗಿಸುತ್ತಾನೆ . ತಾನು ಟಿ.ವಿ. ಯಲ್ಲಿ ಬರುವ ಹಲವು ಪಾಶ್ಚಾತ್ಯ ಸಂಗೀತಗಾರರನ್ನು ಅವಲೋಕಿಸಿ ತನ್ನ ಗುರುವಿನಂತೆ ಹಾಡನ್ನು ಕಲಿತಿರುವ ಈತ ಮುಂದೆ ಬೆಂಗಳೂರು ಅಥವಾ ಮುಂಬೈಅಂತಹ ದೊಡ್ಡ ನಗರದಲ್ಲಿ ಒಳ್ಳೆಯ ಸಂಗೀತ ಗುರುವನ್ನು ಹುಡುಕಿ ಸಂಗೀತ ಕಲಿತು ಇದೇ ಕ್ಷೇತ್ರದಲ್ಲಿ ಮುಂದುವರಿದು ಸಾಧನೆ ಮಾಡಬೇಕೆಂದು ಕನಸು ಕಟ್ಟಿಕೊಂಡಿದ್ದಾನೆ. ಈತ ಬೆಳೆಗಾರ ಬಿದ್ದಾಟಂಡ ಹರ್ಷ ನಾಣಯ್ಯ ಮತ್ತು ಸ್ವರ್ಣ ದಂಪತಿಯ ಪ್ರಥಮ ಪುತ್ರ. ಗೋಣಿಕೊಪ್ಪ ವಿದ್ಯಾನಿಕೇತನ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ.

-ಪಪ್ಪು ತಿಮ್ಮಯ್ಯ