ಮಡಿಕೇರಿ, ಮೇ 19: ಕೊಡವ ಕುಟುಂಬಗಳ ನಡುವೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನಲ್ಲಿ ನಡೆಯುತ್ತಿರುವ ಮಡ್ಲಂಡ ಕ್ರಿಕೆಟ್ ಕಪ್ ಪಂದ್ಯಾಟದಲ್ಲಿ ಮಡ್ಲಂಡ, ದೇಯಂಡ, ಅಮ್ಮಾಟಂಡ, ಕರಿನೆರವಂಡ, ಕುಟ್ಟಂಡ, ಚಕ್ಕೇರ, ಕಾಡ್ಯಮಾಡ, ಬಲ್ಲಿಮಾಡ, ಕಳಕಂಡ ತಂಡಗಳು ಮುನ್ನಡೆ ಸಾಧಿಸಿವೆ.
ಬಾಳೆಯಡ ಹಾಗೂ ದೇಯಂಡ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಳೆಯಡ ತಂಡ ನಿಗದಿತ 5 ಒವರ್‍ನಲ್ಲಿ 1 ವಿಕೆಟ್ ಕಳೆದುಕೊಂಡು 31 ರನ್ ದಾಖಲಿಸಿತು. ದೇಯಂಡ ತಂಡ 1 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ದೇಯಂಡ ಸಂಜು 13 ರನ್ ಗಳಿಸಿದರು. ಬಾಳೆಯಡ ರಮೇಶ್ 14 ರನ್ ಗಳಿಸಿ, ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದÀರು.
ಅಮ್ಮಾಟಂಡ ಹಾಗೂ ಕೀತಿಯಂಡ ನಡುವಿನ ಪಂದ್ಯಾಟದಲ್ಲಿ ಕೀತಿಯಂಡ ತಂಡ ನಿಗದಿತ 5 ಓವರ್‍ನಲ್ಲಿ 5 ವಿಕೆಟ್ ಕಳೆದುಕೊಂಡು 33 ರನ್ ದಾಖಲಿಸಿತು. ಅಮ್ಮಾಟಂಡ ತಂಡ ನಿಗದಿತ ಒವರ್‍ನಲ್ಲಿ 1 ವಿಕೆಟ್ ಕಳೆದುಕೊಂಡು 34 ರನ್ ಗಳಿಸಿ ಜಯ ಸಾಧಿಸಿತು. ಅಮ್ಮಾಟಂಡ ದಿಲೀಪ್ 16 ರನ್ ಗಳಿಸಿದರು. ಕೀತಿಯಂಡ ಸಂದೀಪ್ 8 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಕರಿನೆರವಂಡ ಹಾಗೂ ಮೇಕೇರಿರ ನಡುವಿನ ಪಂದ್ಯಾಟದಲ್ಲಿ ಮೇಕೇರಿರ ತಂಡ ನಿಗದಿತ 5 ಓವರ್‍ನಲ್ಲಿ 9 ವಿಕೆಟ್‍ಗೆ 24 ರನ್ ಗಳಿಸಿತು. ಮಿಥುನ್ 8 ರನ್ ಗಳಿಸಿದರು. ಕರಿನೆರವಂಡ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಕರಿನೆರವಂಡ ದರ್ಶನ್ 13 ರನ್ ಗಳಿಸಿದರು. ಮೇಕೇರಿರ ಮಿಥುನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಕುಟ್ಟಂಡ ಹಾಗೂ ಮಂಡುವಂಡ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕುಟ್ಟಂಡ ತಂಡ ನಿಗದಿತ ಓವರ್‍ನಲ್ಲಿ 3 ವಿಕೆಟ್ ನಷ್ಟಕ್ಕೆ 43 ರನ್ ಪೇರಿಸಿತು. ಕುಟ್ಟಂಡ ಕುಟ್ಟಪ್ಪ 30 ರನ್ ಬಾರಿಸಿದರು. ಮಂಡುವಂಡ ತಂಡ ನಿಗದಿತ ಓವರ್‍ನಲ್ಲಿ 4 ವಿಕೆಟ್ ಕಳೆದುಕೊಂಡು 24 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಮಂಡುವಂಡ ದರ್ಶನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಮುಕ್ಕಾಟಿರ (ದೊಡ್ಡಪುಲಿಕೋಟು) ಹಾಗೂ ಚಕ್ಕೇರ ನಡುವಿನ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಚಕ್ಕೇರ ತಂಡ ನಿಗದಿತ 5 ಓವರ್‍ನಲ್ಲಿ 70 ರನ್ ದಾಖಲಿಸಿತು. ಗುರಿ ಬೆನ್ನಟ್ಟಿದ ಮುಕ್ಕಾಟೀರ ತಂಡ 6 ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿ ಸೋಲು ಕಂಡಿತು. ಚಕ್ಕೇರ ಆಕರ್ಷ್ 27 ರನ್ ದಾಖಲಿಸಿದರು. ಮುಕ್ಕಾಟಿರ ದೀಪಕ್ 16 ರನ್ ಗಳಿಸಿ, ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ದೇಯಂಡ ಹಾಗೂ ಮಡ್ಲಂಡ ನಡುವಿನ ಪಂದ್ಯಾಟದಲ್ಲಿ ಮಡ್ಲಂಡ 3 ವಿಕೆಟ್‍ಗೆ 59 ರನ್ ದಾಖಲಿಸಿತು. ದೇಯಂಡ 1 ವಿಕೆಟ್ ಕಳೆದುಕೊಂಡು ಕೇವಲ 47 ರನ್ ಗಳಿಸಿತು. ಮಡ್ಲಂಡ ದರ್ಶನ್ 29 ರನ್ ದಾಖಲಿಸಿದರು. ದೇಯಂಡ ಸುದೇಶ್ 15 ರನ್ ಗಳಿಸಿದರು. ದೇಯಂಡ ದರ್ಶನ್ ದೇವಯ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಸಬ್ಬುಡ ಹಾಗೂ ಕಾಡ್ಯಮಾಡ ನಡುವಿನ ಪಂದ್ಯಾಟದಲ್ಲಿ ಸಬ್ಬುಡ 3 ವಿಕೆಟ್ ಕಳೆದುಕೊಂಡು 36 ರನ್ ಗಳಿಸಿತು. ಕಾಡ್ಯಮಾಡ 1 ವಿಕೆಟ್ ಕಳೆದುಕೊಂಡು 38 ರನ್ ಗಳಿಸಿ, ಜಯ ಗಳಿಸಿತು. ಸಬ್ಬುಡ ಕಾರ್ಯಪ್ಪ 10 ರನ್ ಗಳಿಸಿ, ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಕಾಡ್ಯಮಾಡ ತಂಡದ ಪ್ರಧಾನ್ 18 ರನ್ ಗಳಿಸಿದರು.
ಕಳಕಂಡ ಹಾಗೂ ಅಲ್ಲಚ್ಚಂಡ ನಡುವಿನ ಪಂದ್ಯದಲ್ಲಿ ಮೂರು ವಿಕೆಟ್ ಕಳೆದುಕೊಂಡ ಕಳಕಂಡ ತಂಡ 54 ರನ್ ಗಳಿಸಿತು. ಅಲ್ಲಚ್ಚಂಡ ತಂಡ 6 ವಿಕೆಟ್ ಕಳೆದುಕೊಂಡು 17 ರನ್ ಗಳಿಸಿ, ಸೋಲನುಭವಿಸಿತು.
ಮಾಪಣಮಾಡ ಹಾಗೂ ಬಲ್ಲಿಮಾಡ ನಡುವಿನ ಪಂದ್ಯದಲ್ಲಿ 2 ವಿಕೆಟ್ ಕಳೆದುಕೊಂಡ ಮಾಪಣಮಾಡ ತಂಡ 59 ರನ್ ದಾಖಲಿಸಿತು. ಮಾಪಣಮಾಡ ಬಿದ್ದಪ್ಪ 21 ರನ್ ಬಾರಿಸಿದರು. ಬಲ್ಲಿಮಾಡ ತಂಡ ನಿಗದಿತ ಓವರ್‍ನಲ್ಲಿ 3 ವಿಕೆಟ್ ಕಳೆದುಕೊಂಡು 59 ರನ್ ಗಳಿಸಿ, ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಸೂಪರ್ ಓವರ್‍ನಲ್ಲಿ ಮಾಪಣಮಾಡ ತಂಡ ಸೋಲನುಭವಿಸಿತು. 25 ರನ್ ಗಳಿಸಿದ ಮಾಪಣಮಾಡ ಬಿದ್ದಪ್ಪ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.