ಮಡಿಕೇರಿ, ಮೇ 19: ಕೊಡವ ಕುಟುಂಬಗಳ ನಡುವೆ 1997 ರಲ್ಲಿ ಕರಡದಲ್ಲಿ 60 ತಂಡಗಳನ್ನು ಒಳಗೊಂಡಂತೆ ಪಾಂಡಂಡ ಕುಟ್ಟಪ್ಪ ಹಾಗೂ ಕಾಶಿ ಸಹೋದರರ ಕನಸ್ಸಿನಂತೆ ಹುಟ್ಟಿದ ಕ್ರೀಡಾ ಕೂಸು ಈ ಕೌಟುಂಬಿಕ ಹಾಕಿ ಉತ್ಸವ... ಬಹುಶಃ ಯಾರೂ ಊಹಿಸಲಾಗದ ರೀತಿಯಲ್ಲಿ ವರ್ಷದಿಂದ ವರ್ಷಕ್ಕೆ ಜನಮನ್ನಣೆಗಳಿಸುವದರೊಂದಿಗೆ ಕೊಡಗು ಮಾತ್ರವಲ್ಲ... ದೇಶ - ವಿದೇಶಗಳಲ್ಲೂ ಹೆಸರು ಮಾಡಿದ ಕೇವಲ ಪುಟ್ಟ ಜನಾಂಗವೊಂದರಲ್ಲಿ ಮಾತ್ರ ನಡೆಯುವ ಈ ಹಾಕಿ ನಮ್ಮೆ ‘ಲಿಮ್ಕಾ ಬುಕ್ ಆಫ್’ ದಾಖಲೆಯೂ ಸೇರಿದಂತೆ ಹಲವಾರು ದಾಖಲೆಗಳ ಮೂಲಕ ಇತಿಹಾಸ ಸೃಷ್ಟಿಸಿದೆ, ಸೃಷ್ಟಿಸುತ್ತಿದೆ.
60 ತಂಡಗಳಿಂದ ಆರಂಭಗೊಂಡ ಉತ್ಸವದಲ್ಲಿ ಈ ಬಾರಿ ಪಾಲ್ಗೊಂಡಿರುವದು ದಾಖಲೆಯ 334 ತಂಡಗಳು. ‘ಗಿನ್ನಿಸ್’ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆಯಲು ಕದ ತಟ್ಟುತ್ತಿರುವ ಈ ಪಂದ್ಯಾವಳಿಯನ್ನು ವರ್ಷಂಪ್ರತಿ ವಿವಿಧ ಕುಟುಂಬಗಳು ಆಯೋಜಿಸಿಕೊಂಡು ಬರುತ್ತಿವೆ. ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಜರುಗಿದ ಕುಲ್ಲೇಟಿರ ಕಪ್ ಹಾಕಿ ಉತ್ಸವದ ಫೈನಲ್ ಪಂದ್ಯ ತಾ. 20 ರಂದು (ಇಂದು) ನಡೆಯಲಿದೆ. ಈ ವರ್ಷದ ಉತ್ಸವವೂ ಸೇರಿದಂತೆ ಹಾಕಿ ಹಬ್ಬದಲ್ಲಿ ಆಗಿರುವ ಹಲವು ವಿಶೇಷತೆಗಳನ್ನು ಇಲ್ಲಿ ನೀಡಲಾಗಿದೆ.
ಅಂಜಪರವಂಡ ತಂಡ
ಎ.ಬಿ. ಸುಬ್ಬಯ್ಯ, ಶರಣ್ ಕಾರ್ಯಪ್ಪ, ದೀಪಕ್ ತಿಮ್ಮಯ್ಯ, ತೇಜ್ ತಮ್ಮಯ್ಯ, ದೀಪಕ್ ಸುಬ್ಬಯ್ಯ, ಅಭಿನ್ ಚಿಟ್ಟಿಯಪ್ಪ, ಶರೀನ್ ಕಾರ್ಯಪ್ಪ, ಹೇಮಂತ್ ದೇವಯ್ಯ, ಜತನ್ ಅಪ್ಪಯ್ಯ, ದಂಜು ಮುತ್ತಪ್ಪ, ರೋಷನ್ ಮಾದಪ್ಪ, ವಿನಯ್ ಪೂವಣ್ಣ, ವಿಷ್ಮ ಅಪ್ಪಯ್ಯ, ಸಚಿನ್ ಅಯ್ಯಪ್ಪ, ಪ್ರಾಣ್ ಕಾರ್ಯಪ್ಪ, ಚಿರಾಗ್ ಚಂಗಪ್ಪ, ಸಚಿನ್ ಬೋಪಣ್ಣ, ಕುಶಾಲಪ್ಪ. ಕೋಚ್: ರಾಜೇಶ್ ಮುತ್ತಪ್ಪ, ಮ್ಯಾನೇಜರ್: ಅನಿಲ್ ಮಂದಣ್ಣ
ಚೇಂದಂಡ ತಂಡ - 2018
ಪೊನ್ನಣ್ಣ, ಅಪ್ಪಣ್ಣ, ಮಿಥುನ್, ಬೋಪಣ್ಣ, ತಮ್ಮಯ್ಯ, ಜತಿನ್, ಸೋನು, ಚಿರಾಗ್, ರೋಷನ್, ಅಮೋಘ್, ಆಧಿತ್ಯ, ಜಾಗೃತ್, ಹರೀಶ್, ವರೂಣ್, ಮೋಕ್ಷಿತ್, ತಮ್ಮಯ್ಯ, ಶಮಿ, ಸುಬ್ಬಯ್ಯ. ಕೋಚ್: ಈರಪ್ಪ, ಮ್ಯಾನೇಜರ್: ಪೂವಯ್ಯ.ಇತ್ತಂಡಗಳ ಫೈನಲ್ ಹಾದಿ
ಅಂಜಪರವಂಡ ಗೆಲುವು : ಐನ್‍ಮನೆ - ಯವಕಪಾಡಿ
ಗಿ/s
ಚೋಡುಮಾಡ - 4-0
ಬೇಪಡಿಯಂಡ - ವಾಕ್‍ಓವರ್
ಕಡೇಮಾಡ - 2-0
ಚೆಕ್ಕೇರ - 3-0
ಚೆಪ್ಪುಡೀರ - 3-1
ಪರದಂಡ - 3-1
ಚೇಂದಂಡ ಗೆಲುವು :
ಐನ್‍ಮನೆ - ಚೊಂಬುಬೊಳ್ಳಿಯೂರ್ (ಈಗಿನ ಚೆಂಬೆಬೆಳ್ಳೂರು)
ಗಿ/s
ಮಾಪಂಗಡ - 2-1
ಚೌರೀರ (ಹೊದವಾಡ) - 3-1
ಕುಪ್ಪಂಡ (ಕೈಕೇರಿ) - 4-0
ಮುಕ್ಕಾಟಿರ (ಬೋಂದ) 2-0
ಸೋಮೆಯಂಡ - 2-1
ಕೂತಂಡ - 4-1ಚೇಂದಂಡ ಕುರಿತು
ಯುವ ಆಟಗಾರರನ್ನು ಹೊಂದಿರುವ ಚೇಂದಂಡ ಕುಟುಂಬ 2015 ರಲ್ಲಿ ವೀರಾಜಪೇಟೆಯಲ್ಲಿ ನಡೆದ ಕುಪ್ಪಂಡ ಕಪ್‍ನಲ್ಲಿ ರನ್ನರ್ಸ್ ಪ್ರಶಸ್ತಿಗಳಿಸುವ ಮೂಲಕ ಹಾಕಿ ಪಂದ್ಯಾವಳಿಯಲ್ಲಿ ಗಮನಸೆಳೆದಿತ್ತು. 2016 ರಲ್ಲಿ ನಿರ್ಣಾಯಕ ಹಂತ ತಲಪುವಲ್ಲಿ ವಿಫಲವಾದರೂ 2017 ರಲ್ಲಿ ನಾಪೋಕ್ಲುವಿನಲ್ಲಿ ನಡೆದ ಬಿದ್ದಾಟಂಡ ಕಪ್‍ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದ್ದು ಮತ್ತೊಮ್ಮೆ ಕಪ್ ಗಳಿಸುವ ಹಾದಿಯಲ್ಲಿದೆ.ಅಂಜಪರವಂಡ ಸಾಧನೆ
ಅಂಜಪರವಂಡ ಕುಟುಂಬ ತಂಡ ಪ್ರಥಮ ವರ್ಷದ ಕೌಟುಂಬಿಕ ಹಾಕಿ ಪಂದ್ಯಾವಳಿ ಪ್ರಾರಂಭಗೊಂಡ ವರ್ಷವಾದ 1997 ರಲ್ಲಿ ಕರಡದಲ್ಲಿ ರನ್ನರ್ಸ್ ಪ್ರಶಸ್ತಿ ಹಾಗೂ 2007 ರಲ್ಲಿ ಕಾಕೋಟುಪರಂಬುವಿನಲ್ಲಿ ನಡೆದ ಮಂಡೇಟಿರ ಕಪ್‍ನಲ್ಲಿ ರನ್ನರ್ಸ್ ಪ್ರಶಸ್ತಿ ಗಳಿಸಿತ್ತು.
2008 ರಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಅಳಮೇಂಗಡ ಕಪ್ ಹಾಗೂ 2013 ರಲ್ಲಿ ಬಾಳುಗೋಡುವಿನಲ್ಲಿ ನಡೆದ ಮಾದಂಡ ಕಪ್‍ನಲ್ಲಿ ವಿನ್ನರ್ಸ್. ಇದೀಗ ನಾಲ್ಕು ವರ್ಷಗಳ ಬಳಿಕ ಮತ್ತೆ ಫೈನಲ್ ತಲಪಿದೆ.ಕುಲ್ಲೇಟಿರ ಕಪ್ ಈ ಬಾರಿ
(ಸೆಮಿಫೈನಲ್ ತನಕ)
ಒಟ್ಟು ಪಂದ್ಯ - 333
ವಾಕ್‍ಓವರ್ - 6
ಒಟ್ಟು ಗೋಲು - 1314
ಫೀಲ್ಡ್ ಗೋಲು - 1107
ಟೈಬ್ರೇಕರ್ ಗೋಲು - 207
ಒಟ್ಟು ಪೆನಾಲ್ಟಿ ಕಾರ್ನರ್ - 1698
ಗೋಲಾಗಿ ಪರಿವರ್ತನೆ - 193
ಒಟ್ಟು ಪೆನಾಲ್ಟಿ ಸ್ಟ್ರೋಕ್ - 14
ಗೋಲಾಗಿ ಪರಿವರ್ತನೆ - 10
ಒಟ್ಟು ಕಾರ್ಡ್ - 221
ಗ್ರೀನ್ ಕಾರ್ಡ್ - 182
ಹಳದಿ ಕಾರ್ಡ್ - 38
ರೆಡ್ ಕಾರ್ಡ್ - 1
ಒಟ್ಟು ಹ್ಯಾಟ್ರಿಕ್ ಗೋಲು - 7
ಯುವತಿಯರು ಗೋಲು ಬಾರಿಸಿದರು... ಮಹಿಳೆಯರೂ ಆಡಿದರು
ಪುರುಷರೊಂದಿಗೆ ಮಹಿಳೆಯರು, ಯುವತಿಯರು ಸೇರಿ ಆಟವಾಡುವ ವಿಶಿಷ್ಟವಾದ ಈ ಹಾಕಿ ಉತ್ಸವದಲ್ಲಿ ಈ ಬಾರಿ ಯುವತಿಯರೂ ಸಾಧನೆ ತೋರಿದ್ದಾರೆ.
ಕುಲ್ಲೇಟಿರ ಕಪ್‍ನಲ್ಲಿ ಜೂನಿಯರ್ ಇಂಡಿಯಾ ಆಟಗಾರ್ತಿ ಮಲ್ಲಮಾಡ ಲೀಲಾವತಿ, ಕಾಳೇಂಗಡ ತಂಡದ ಸಹೋದರಿಯರಾದ ಮೋನಿಷ ಹಾಗೂ ಯಶಸ್ವಿನಿ ಗೋಲು ಬಾರಿಸಿದ್ದಾರೆ. ಭಾರತ ತಂಡವನ್ನು ಪ್ರತಿನಿಧಿಸಿದ್ದ ಮಲ್ಲಮಾಡ ಪೊನ್ನಮ್ಮ ಈ ಬಾರಿ ತಾನು ವಿವಾಹವಾಗಿರುವ ಕಂಬೀರಂಡ ಕುಟುಂಬದ ಪರ ಆಡಿರುವದು ವಿಶೇಷ. ಸಾಯಿ ಆಟಗಾರ್ತಿ ಅಂಜಪರವಂಡ ವಿಷ್ಮ, ಅಜ್ಜೇಟಿರ ವಿಲ್ಮ ಪಳಂಗಪ್ಪ, ಕೊಂಗೇಟಿರ ಅಕ್ಕಮ್ಮ, ಪೆಬ್ಬಟ್ಟಿರ ಜೂನಾ ಮುತ್ತಮ್ಮ ಕಾವೇರಮ್ಮ ಸೇರಿದಂತೆ ಸುಮಾರು 15 ರಿಂದ 20 ರಷ್ಟು ಯುವತಿಯರು ಆಟವಾಡಿ ಗಮನಸೆಳೆದಿದ್ದಾರೆ. ಜಬ್ಬಂಡ ತಂಡದ ಪರ ಇಬ್ಬರು ಮಹಿಳೆಯರು ಆಡಿರುವದು, ಅಜ್ಜೇಟಿರ ತಂಡದ ವ್ಯವಸ್ಥಾಪಕರಾಗಿ ರಾಣಿ ಪಳಂಗಪ್ಪ ಅವರು ತಂಡವನ್ನು ಹುರಿದುಂಬಿಸಿದ್ದಾರೆ.
ಗೋಲ್ ಕೀಪಿಂಗ್ ಮಾಡಿದ ರೇಷ್ಮ
ಕೆಚ್ಚೆಟ್ಟೀರ ತಂಡದ ಪರ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಸಾಧನೆ ತೋರಿರುವ ಕಚ್ಚೆಟ್ಟೀರ ರೇಷ್ಮಾ ದೇವಯ್ಯ ಅವರು ಗೋಲ್ ಕೀಪಿಂಗ್ ಮಾಡಿರುವದು ಈ ಬಾರಿಯ ವಿಶೇಷ.
ಸೆಮಿಫೈನಲ್‍ನಲ್ಲಿ ವಾಹನ ನಿಲುಗಡೆ ಹಾಕಿ ಪ್ರೇಮಿಗಳಿಗೆ ರಸದೌತಣ : ಇಂದು ಅಂತಿಮ ಸಮರ ನಾಪೆÇೀಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಏ. 15 ರಂದು ಆರಂಭಗೊಂಡ 22ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆ ಕುಲ್ಲೇಟಿರ ಕಪ್ 2018ರ ಚಾಂಪಿಯನ್ ಪಟ್ಟಕ್ಕಾಗಿ ಎರಡು ಬಲಿಷ್ಠ ಮಾಜಿ ಚಾಂಪಿಯನ್‍ಗಳಾದ ಅಂಜಪರವಂಡ ಮತ್ತು ಚೇಂದಂಡ ತಂಡಗಳ ನಡುವೆ ತಾ. 20 ರಂದು ಹಣಾಹಣಿ ನಡೆಯಲಿದೆ. ಈ ಹಿಂದೆ ಅಂಜಪರವಂಡ ತಂಡ ಎರಡು ಬಾರಿ ಚಾಂಪಿಯನ್ ಪಟ್ಟ ಪಡೆದಿದ್ದು, ನಾಲ್ಕು ವರ್ಷಗಳ ನಂತರ ಮತ್ತೆ ಪ್ರಶಸ್ತಿ ಪಡೆಯಲು ತಯಾರಿ ನಡೆಸಿದೆ. 2017ನೇ ವರ್ಷ ಇದೇ ಮೈದಾನದಲ್ಲಿ ನಡೆದ ಬಿದ್ದಾಟಂಡ ಕಪ್ ಹಾಕಿ ನಮ್ಮೆಯಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ ಚಾಂಪಿಯನ್ ಪಟ್ಟ ಪಡೆದ ಚೇಂದಂಡ ತಂಡವು ಎರಡನೇ ಬಾರಿಗೂ ಚಾಂಪಿಯನ್ ಪಟ್ಟಕ್ಕಾಗಿ ಹೋರಾಡಲಿದೆ.
ಹಾಕಿ ಪ್ರೇಮಿಗಳಿಗೆ ರಸದೌತಣ: ನಾಲ್ಕುನಾಡು ಕ್ರೀಡೆ ಮತ್ತು ಕ್ರೀಡಾ ಪ್ರೇಮಿಗಳ ತವರೂರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದಕ್ಕೆ ಪೂರಕವೆಂಬಂತೆ ನಾಪೆÇೀಕ್ಲುವಿನಲ್ಲಿ ಸತತವಾಗಿ ಎರಡು ವರ್ಷ ನಡೆದ ಹಾಕಿ ನಮ್ಮೆಯಲ್ಲಿ ಕ್ರೀಡಾ ಪ್ರೇಮಿಗಳು ಜಾತಿ, ಮತ, ಧರ್ಮದ ಬೇಧವಿಲ್ಲದೆ ಪ್ರತೀ ದಿನ ಉತ್ಸಾಹದಿಂದ ತಂಡೋಪತಂಡವಾಗಿ ಆಗಮಿಸಿ ಪಂದ್ಯಗಳನ್ನು ವೀಕ್ಷಿಸುವದರ ಮೂಲಕ ಕ್ರೀಡಾ ಪಟುಗಳಿಗೆ, ಆಯೋಜಕರಿಗೆ ಪೆÇ್ರೀತ್ಸಾಹ ನೀಡಿದ್ದಾರೆ.
ಸನ್ಮಾನ: 35 ದಿನಗಳ ಕಾಲ ನಡೆದ ಹಾಕಿ ನಮ್ಮೆಯಲ್ಲಿ ನೂರಾರು ಜನರ ನಿರಂತರ ಪರಿಶ್ರಮ, ಸೇವೆ, ಸಲಹೆ, ಮಾರ್ಗದರ್ಶನ ನೀಡಿದ ಮತ್ತು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರಮುಖರು ಮತ್ತು ಸಾಧನೆ ಮಾಡಿದವರನ್ನು ಹಾಕಿ ನಮ್ಮೆಯಲ್ಲಿ ಸನ್ಮಾನಿಸಲಾಯಿತು. ಅವರಲ್ಲಿ ಜಾನಪದ ಕಲಾವಿದ ಕಂಗಾಂಡ ಮಿಟ್ಟು ಪೂಣಚ್ಚ, ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ, ಥ್ರೋಬಾಲ್ ಆಟಗಾರ್ತಿ ಬೊಪ್ಪಂಡ ರೀಮಾ, ವೀಕ್ಷಕ ವಿವರಣೆಗಾರರಾದ ಕರವಂಡ ಅಪ್ಪಣ್ಣ, ಮೂಡೇರ ಹರೀಶ್ ಕಾಳಯ್ಯ, ಮಣವಟ್ಟಿರ ದಯಾ ಕುಟ್ಟಪ್ಪ, ಚೆಯ್ಯಂಡ ಕಸ್ತೂರಿ ತಿಮ್ಮಯ್ಯ, ಅಂಜಪರವಂಡ ಬೊಳ್ಳಮ್ಮ, ಮೈದಾನದ ತಾಂತ್ರಿಕ ವರ್ಗದ ಕಾಟುಮಣಿಯಂಡ ಉಮೇಶ್, ಕುಂಡ್ಯೋಳಂಡ ಪೂವಣ್ಣ, ಚೆಯ್ಯಂಡ ರಘು ತಿಮ್ಮಯ್ಯ, ಕಂಗಾಂಡ ನವೀನ್, ಮೈದಾನದ ನಿರ್ವಹಣೆ ಜವಾಬ್ದಾರಿ ವಹಿಸಿರುವ ಟಾಟಾ ಕಾಫಿ ಸಂಸ್ಥೆಯ ರಾಜು ಅವರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ತಾಂತ್ರಿಕ ತಂಡ: 35 ದಿನಗಳ ಕಾಲ ನಡೆದ ಕುಲ್ಲೇಟಿರ ಕಪ್ ಹಾಕಿ ನಮ್ಮೆಯ ಯಶಸ್ವಿಗೆ ತಾಂತ್ರಿಕ ನಿರ್ದೇಶಕ ಬಡಕಡ ಸುರೇಶ್ ಬೆಳ್ಯಪ್ಪ ಮತ್ತು ತೀರ್ಪುಗಾರರ ಅಧ್ಯಕ್ಷ ಬುಟ್ಟಿಯಂಡ ಚಂಗಪ್ಪ ಅವರ ನೇತೃತ್ವದಲ್ಲಿ 46 ಜನರ ತಂಡ ಕೆಲಸ ನಿರ್ವಹಿಸಿದೆ. ಕೊಕ್ಕಂಡ ರೋಶನ್, ತೀತಿರ ಸೋಮಣ್ಣ, ನೆಲ್ಲಮಕ್ಕಡ ಪವನ್, ಕೊಂಡಿರ ಕೀರ್ತಿ, ಬೊಳ್ಳಚಂಡ ನಾಣಯ್ಯ, ಮೂಕಚಂಡ ನಾಚಪ್ಪ, ಕೋಡಿಮಣಿಯಂಡ ಗಣಪತಿ, ಕುಪ್ಪಂಡ ದಿಲನ್, ಮೇಕತಂಡ ಬೋಪಯ್ಯ, ಚೋಯಮಾಡಂಡ ಚಂಗಪ್ಪ, ಅರೆಯಡ ಗಿರೀಶ್, ಚೆಯ್ಯಂಡ ಅಪ್ಪಚ್ಚು, ಕಾಟುಮಣಿಯಂಡ ಕಾರ್ತಿಕ್, ಅನ್ನಾಡಿಯಂಡ ಪೆÇನ್ನಣ್ಣ, ಸುಳ್ಳಿಮಾಡ ಸುಬ್ಬಯ್ಯ, ಶರತ್ ಸುಬ್ಬಯ್ಯ, ಕಲಿಯಂಡ ಬಿದ್ದಪ್ಪ, ಕುಮ್ಮಂಡ ಬೋಸ್ ಚಂಗಪ್ಪ, ಚಂದಪಂಡ ಆಕಾಶ್ ಚಂಗಪ್ಪ, ಬಡಕಡ ದೀನಾ ಪೂವಯ್ಯ, ಅಂಜಪರವಂಡ ಕುಶಾಲಪ್ಪ, ಕರವಂಡ ಅಪ್ಪಣ್ಣ, ಪಂದಿಯಂಡ ವಿಶಾಲ್, ಮಲ್ಲಮಾಡ ಸಂತೋಶ್, ಗುಡ್ಡಮಾಡ ದರ್ಶನ್, ಚೋಯಮಾಡಂಡ ಬಿಪಿನ್, ಚೋಕಂಡ ಚಿಟ್ಟಿಯಪ್ಪ, ಮೇರಿಯಂಡ ಅಯ್ಯಣ್ಣ, ಚೀಯಕಪೂವಂಡ ತೀಶ್ಮ, ಪ್ರೀತು, ಚೀಕಂಡ ಭಾಗ್ಯಶ್ರೀ, ಅಚ್ಚಕಾಳೆರ ಹರ್ಶಿತಾ, ಪಾಳೆಯಡ ಕೃಪನ್, ಮುಕ್ಕಾಟಿರ ಯಶಸ್ವಿ, ವಾಟೇರಿರ ಸಚಿನ್, ಪಟ್ಟಚೆರುವಂಡ ಗಗನ್, ಮೇರಿಯಂಡ ಮುತ್ತಪ್ಪ, ಅಪ್ಪಚೆಟ್ಟೋಳಂಡ ಅಯ್ಯಪ್ಪ, ಚೋಯಮಾಡಂಡ ಮಿಲನ್, ಮಾರ್ಚಂಡ ಯಶ್ವಿನ್, ಬೊಳ್ಳಂಡ ನಾಚಪ್ಪ, ಚೀಯಕಪೂವಂಡ ಪಳಂಗಪ್ಪ, ಬೊಳ್ಳಂಡ ಮುತ್ತಣ್ಣ, ಮುಕ್ಕಾಟಿರ ತರುಣ್, ಬುಟ್ಟಿಯಂಡ ನಿದೀಪ್ ನಂಜಪ್ಪ, ಮುಕ್ಕಾಟಿರ ಚಿರಣ್ ಕಾರ್ಯನಿರ್ವಹಿಸಿದ್ದಾರೆ. ತಾಂತ್ರಿಕ ಸಮಿತಿಯಲ್ಲಿ ಹಲವು ಮಹಿಳೆಯರೂ ಕಾರ್ಯನಿರ್ವಹಿಸಿದ್ದಾರೆ.
- ಪಿ.ವಿ. ಪ್ರಭಾಕರ್ / ದುಗ್ಗಳ ಸದಾನಂದ
ಅಪಾರ ಪ್ರೇಕ್ಷಕರು... ಬೆಳ್ಳಿಯ ಸ್ಟಿಕ್-ಬಾಲ್
ಕೌಟುಂಬಿಕ ಉತ್ಸವವೆ ನಿಸಿದರೂ ಅಂತರರಾಷ್ಟ್ರೀಯ ಮಟ್ಟದ ನಿಯಮಾವಳಿಯಂತೆ ಹಾಗೂ ಯಾವದೇ ರಾಷ್ಟ್ರೀಯ - ಅಂತರರಾಷ್ಟ್ರೀಯ ಮಟ್ಟದ ಪಂದ್ಯಾವಳಿಗೆ ಕಡಿಮೆ ಇಲ್ಲದಂತೆ ನಡೆಯುವ ಈ ಪಂದ್ಯಗಳ ವೀಕ್ಷಣೆಗೆ ಅದರಲ್ಲೂ ಫೈನಲ್ ಪಂದ್ಯ ವೀಕ್ಷಣೆಗೆ ಸುಮಾರು 30 ರಿಂದ 40 ಸಾವಿರದಷ್ಟು ಹಾಕಿ ಅಭಿಮಾನಿಸಗಳು ಸಂಭ್ರಮದಿಂದ ಮಹಿಳೆಯರು, ಹಸುಗೂಸು ಸೇರಿದಂತೆ ಅಬಾಲವೃದ್ಧರಾಗಿ ಜಮಾಯಿಸುವದು ವಿಶೇಷ.
ಒಂದೇ ಜನಾಂಗಕ್ಕೆ ಸೇರಿದ ಸುಮಾರು ಐದು ಸಾವಿರದಷ್ಟು ಆಟಗಾರರು, ತಾಂತ್ರಿಕ ಸಮಿತಿಯವರು, ವೀಕ್ಷಕ ವಿವರಣೆ ಗಾರರು ಕಾರ್ಯನಿರ್ವಹಿಸುವದು ಮತ್ತೊಂದು ವಿಶೇಷತೆ.
ಇಂತಹ ಪಂದ್ಯಾವಳಿ ದೇಶ - ವಿದೇಶದ ಇನ್ನೆಲ್ಲೂ ನಡೆಯದಿರುವದು, ಪಂದ್ಯಾವಳಿಯನ್ನು ಬೆಳ್ಳಿಯ ಹಾಕಿ ಸ್ಟಿಕ್ - ಬೆಳ್ಳಿಯ ಚೆಂಡು ಬಳಸಿ ಉದ್ಘಾಟಿಸುವದು ಒಲಂಪಿಕ್ಸ್ ಸೇರಿದಂತೆ ದೇಶವನ್ನು ಪ್ರತಿನಿಧಿಸಿರುವ ಖ್ಯಾತ ಆಟಗಾರರು ತಮ್ಮ ತಮ್ಮ ಕುಟುಂಬದ ಪರ ಆಡುವದು ಎಲ್ಲರ ಗಮನಸೆಳೆಯುತ್ತದೆ.ಪೊಮ್ಮಕ್ಕಡ ದಿನ ವಿಶೇಷ
ಕುಲ್ಲೇಟಿರ ಕುಟುಂಬದ ಪೊನ್ನಣ್ಣ ಹಾಗೂ ಮಾಣಿಚ್ಚ ಅವರ ಐತಿಹಾಸಿಕ ಸಾಧನೆಯನ್ನು ಮೆಲುಕು ಹಾಕುವದರೊಂದಿಗೆ ಕುಲ್ಲೇಟಿರ ಕುಟುಂಬದವರು ಈ ಬಾರಿಯ ಪಂದ್ಯಾವಳಿಯಲ್ಲಿ ಪಾಲ್ಗೊಂಡು (ವಾಕ್‍ಓವರ್ ಹೊರತುಪಡಿಸಿ) ಪರಾಭವಗೊಂಡ ತಂಡಗಳಿಗೆ ಬೃಹತ್ ಒಡಿಕತ್ತಿ ನೀಡಿರುವದು ವಿಶೇಷವಾಗಿದೆ.
* ಪಂದ್ಯಾವಳಿಯ ನಡುವೆ ಪ್ರತ್ಯೇಕವಾಗಿ ಪೊಮ್ಮಕ್ಕಡ ದಿನ, ಪ್ರೀ ಕ್ವಾರ್ಟರ್ ಫೈನಲ್‍ನಿಂದ ಹಾಕಿಗೆ ಸಂಬಂಧಿಸಿದ ‘ಕ್ವಿಜ್’ ಆಯೋಜಿಸಿರುವದು ಗಮನಸೆಳೆದಿದೆ.
* ಚುನಾವಣೆಯ ಭರಾಟೆ ಹಾಗೂ ಮಳೆಯ ಅಬ್ಬರದಿಂದ ಸಮಸ್ಯೆಯಾಗಿರುವದನ್ನು ಹೊರತುಪಡಿಸಿದರೆ ಸಂಘಟಕರು ನಿಟ್ಟುಸಿರು ಬಿಡುವಂತಾಗಿದೆ.
* ನಾಪೋಕ್ಲುವಿಗೆ ಈತನಕ 16 ಇಂಚಿಗೂ ಅಧಿಕ ಮಳೆ ಸುರಿದಿರುವದೂ ಗಮನಾರ್ಹ.
ಉದ್ಘಾಟನೆ - ಸಮಾರೋಪಕ್ಕೆ ಒಲಂಪಿಯನ್‍ಪ್ರಸಕ್ತ ವರ್ಷದ ಕೌಟುಂಬಿಕ ಹಾಕಿ ಉತ್ಸವವನ್ನು ಉದ್ಘಾಟನೆ ಮಾಡಿದವರು 1972 ರ ನೊನಿಚ್ ಒಲಂಪಿಕ್ಸ್‍ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಆಟಗಾರರಾದ ಮಾಜಿ ನಾಯಕ ಮೊಳ್ಳೆರ ಪಿ. ಗಣೇಶ್. ಈ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರುವ ಅತಿಥಿ 1980 ರ ಮೊಸ್ಕೊ ಒಲಂಪಿಕ್ಸ್‍ನಲ್ಲಿ ಚಿನ್ನದ ಪಕದಗಳಿಸಿರುವ ತಂಡದ ಸದಸ್ಯ ಮನೆಯಪಂಡ ಎಂ. ಸೋಮಯ್ಯ ಅವರಾಗಿದ್ದಾರೆ.
ಈ ಪಂದ್ಯಾವಳಿಯಲ್ಲಿ ಒಲಂಪಿಕ್ ಆಟಗಾರರಾದ ಡಾ. ಅಂಜಪರವಂಡ ಸುಬ್ಬಯ್ಯ, ಬಾಳೆಯಡ ಸುಬ್ರಮಣಿ, ಚೆಪ್ಪುಡಿರ ಪೂಣಚ್ಚ, ಚೇಂದಂಡ ನಿಕಿನ್ ತಿಮ್ಮಯ್ಯ ಅವರುಗಳು ಪಾಲ್ಗೊಂಡಿರುವದು ಕೌಟುಂಬಿಕ ಹಾಕಿಯ ಜನಪ್ರಿಯತೆಗೆ ಸಾಕ್ಷಿ.
ಇವರುಗಳಲ್ಲದೆ ವಿಶ್ವಕಪ್ ಸೇರಿದಂತೆ ಇನ್ನಿತರ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವವರೂ ಒಡನಾಡಿದ್ದಾರೆ.