* ಕುಲ್ಲೇಟಿರ ಕುಟುಂಬಕ್ಕೆ ಸಂಬಂಧಿಸಿದ ಮಕ್ಕಳು, ಸ್ನೇಹಿತರ ಮಕ್ಕಳು, ಅವರ ಹಿಂದೆ ಕುಲ್ಲೇಟಿರ ಮಹಿಳೆಯರು ಸಾಂಪ್ರದಾಯಿಕ ಧಿರಿಸಿನಲ್ಲಿ ಮೈದಾನದ ಸುತ್ತ ಮೆರವಣಿಗೆ ನಡೆಸಿದರು. ಕುಪ್ಯಚೇಲೆ ಧರಿಸಿದ್ದ ಪುರುಷರು ದುಡಿಕೊಟ್ಟ್‍ಪಾಟ್‍ನೊಂದಿಗೆ ಹೆಜ್ಜೆ ಹಾಕಿದರು. ಇವರ ನಡಿಗೆಗೆ ಒಡ್ಡೋಲಗದ ಸಾಥ್ ಕೂಡ ಇತ್ತು.

ಡ್ರೋನ್ ಕೆಮರಾ

* ಹಾಕಿ ಪಂದ್ಯಾವಳಿಯ ವಿಶೇಷತೆಗಳನ್ನು ಮೂರು ಡ್ರೋನ್ ಕೆಮರಾ ಬಳಸಿ ಪುತ್ತರಿರ ಪಪ್ಪು ತಿಮ್ಮಯ್ಯ, ತೇಜಸ್ ಹಾಗೂ ರಾಜ್ ಮಾಚಯ್ಯ ತಂಡದವರು ಚಿತ್ರೀಕರಿಸುತ್ತಿದ್ದರು.

ಬ್ಯಾಂಡ್ - ಕೊಳಲು - ನರ್ತನ

* ಮೈದಾನದ ನಾಲ್ಕು ಬದಿಗಳಲ್ಲೂ ಹಾಕಿ ಆಟದ ಸವಿಯನ್ನು ಅನುಭವಿಸುತ್ತಿದ್ದ ಯುವ ಕ್ರೀಡಾಭಿಮಾನಿಗಳು ಬ್ಯಾಂಡ್, ಕೊಳಲುವಾದನ, ನರ್ತನದೊಂದಿಗೆ ಹರ್ಷೊದ್ಗಾರದೊಂದಿಗೆ ಆನಂದಿಸುತ್ತಿದ್ದುದು ಕಂಡು ಬಂದಿತು.

ಪಾಲ್ಗೊಳ್ಳುವಿಕೆ

* ಕೇವಲ ಕೊಡವ ಜನಾಂಗದವರು ಮಾತ್ರವಲ್ಲದೆ ನಾಲ್ಕುನಾಡು ವಿಭಾಗದ ಇತರ ಜನಾಂಗ ಬಾಂಧವರೂ ಮೈದಾನದಲ್ಲಿ ಪಂದ್ಯ ವೀಕ್ಷಿಸುತ್ತಿದ್ದರು.

ಸಾಂಸ್ಕøತಿಕ ನೃತ್ಯ

ಮುಂದಾಳತ್ವದಲ್ಲಿ ತಾಂತ್ರಿಕ ಸಮಿತಿಯ ಎಲ್ಲರನ್ನೂ ಮೈದಾನದ ನಡುವೆ ಪರಿಚಯಿಸಲಾಯಿತು.

ಅಂತರರಾಷ್ಟ್ರೀಯ ಶೈಲಿ

* ಇತ್ತಂಡಗಳ ಆಟಗಾರರು ಮೈದಾನಕ್ಕೆ ಇಳಿದಿದ್ದು, ಅಂತರರಾಷ್ಟ್ರೀಯ ಶೈಲಿಯಲ್ಲಿತ್ತು. ಪ್ರತಿ ಆಟಗಾರರೊಂದಿಗೆ ಪುಟ್ಟ ಮಕ್ಕಳು ಹೆಜ್ಜೆ ಹಾಕಿದರೆ, ತೀರ್ಪುಗಾರರ ಹಿಂದೆ ಆಟಗಾರರು ಮೈದಾನಕ್ಕೆ ಇಳಿದರು.

ವಾಕಿ ಟಾಕಿ

* ಮೈದಾನದ ಉಸ್ತುವಾರಿ ಹಾಗೂ ಪರಸ್ಪರ ಸಂಪರ್ಕಕ್ಕೆ ವಾಕಿಟಾಕಿ ಬಳಸುತ್ತಿದ್ದುದು ಕಂಡು ಬಂದಿತು.

ಬೆಳ್ಳಿಯ ಸ್ಟಿಕ್ - ಬಾಲ್

ಫೈನಲ್ ಪಂದ್ಯದ ಮುಖ್ಯ ಅತಿಥಿಗಳು ಬೆಳ್ಳಿಯ ಸ್ಟಿಕ್‍ನಿಂದ ಬೆಳ್ಳಿಯ ಚೆಂಡನ್ನು ತಳ್ಳುವ ಮೂಲಕ ಪಂದ್ಯವನ್ನು ಉದ್ಘಾಟಿಸಿದರು.

ಗಮನ ಸೆಳೆದ ಬಾಡಿ ಬಿಲ್ಡರ್

ಪಂದ್ಯದ ಮಧ್ಯಂತರ ಅವಧಿಯಲ್ಲಿ ಖ್ಯಾತ ಬಾಡಿಬಿಲ್ಡರ್ ಪುಚ್ಚಿಮಾಡ ದೀಪಕ್ ಕಾವೇರಪ್ಪ ದೇಹದಾಢ್ರ್ಯ ಪ್ರದರ್ಶನ ನೀಡಿದರು. ತಮ್ಮ ಸಾಮಥ್ರ್ಯ ಪ್ರದರ್ಶನದೊಂದಿಗೆ ಇವರು ಮೈದಾನ ಸುತ್ತ ಹೆಜ್ಜೆ ಹಾಕಿದಾಗ ಪ್ರೇಕ್ಷಕರು ಫೋಟೋ ಕ್ಲಿಕ್ಕಿಸುವದರೊಂದಿಗೆ ಚಪ್ಪಾಳೆಯ ಮೂಲಕ ಸ್ವಾಗತಿಸಿದರು.

ಆಕರ್ಷಕ ವೀಕ್ಷಕ ವಿವರಣೆ

* ಅಂತರರಾಷ್ಟ್ರೀಯ ಮಟ್ಟದ ಮಾಹಿತಿ ಹಾಗೂ ಕೌಟುಂಬಿಕ ಹಾಕಿಯ ವಿವರದೊಂದಿಗೆ ಖ್ಯಾತ ವೀಕ್ಷಕ ವಿವರಣೆಗಾರರಾದ ಚೆಪ್ಪುಡೀರ ಕಾರ್ಯಪ್ಪ ಹಾಗೂ ಚೋಕೀರ ಅನಿತಾ ದೇವಯ್ಯ ನೆರೆದಿದ್ದವರ ಗಮನ ಸೆಳೆದರು. ಚೇಂದ್ರಿಮಾಡ ಬೊಳ್ಳಮ್ಮ ಅವರು ಪಂದ್ಯದ ಅಗತ್ಯ ಮಾಹಿತಿ ಒದಗಿಸುತ್ತಿದ್ದರು.

* ಗೋಣಿಕೊಪ್ಪಲು ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು ಕತ್ತಿಯಾಟ್ ಹಾಗೂ ಪರೆಯಕಳಿ ಪ್ರದರ್ಶನ ನೀಡಿದರು.

* ಮೈದಾನದ ವೇದಿಕೆ ಎದುರು ರಾಷ್ಟ್ರೀಯ ಧ್ವಜ ಮೇಲೆ ಹಾರಾಡುತ್ತಿದ್ದರೆ, ಅದರ ಕೆಳಗೆ ಕೊಡವ ಹಾಕಿ ಅಕಾಡೆಮಿ ಹಾಗೂ ಕುಲ್ಲೇಟಿರ ಕುಟುಂಬದ ಧ್ವಜ ರಾರಾಜಿಸುತಿತ್ತು.

ಸನ್ಮಾನ - ಗೌರವ

* ಅಂತರರಾಷ್ಟ್ರೀಯ ಹಾಕಿ ವೀಕ್ಷಕ ವಿವರಣೆಗಾರ ಕೊಟ್ಟಿಯಂಡ ಜೀವನ್ ಚಿಣ್ಣಪ್ಪ ಹಾಗೂ ಪಂದ್ಯಾಟದ ಉಸ್ತುವಾರಿಗೆ ಸಹಕರಿಸಿದ್ದ ಉದ್ಯಮಿ ಅರೆಯಡ ಪವಿನ್ ಪೊನ್ನಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮೈದಾನದ ಉಸ್ತುವಾರಿ ಟಾಟಾ ಕಾಫಿಯ ರಾಜು ಅವರನ್ನೂ ಪರಿಚಯಿಸಲಾಯಿತು.

ತಾಂತ್ರಿಕ ಸಮಿತಿ

* ಆಟಕ್ಕೂ ಮುನ್ನ ಪಂದ್ಯಾವಳಿ ನಿರ್ದೇಶಕ ಬಡಕಡ ಸುರೇಶ್ ಹಾಗೂ ತೀರ್ಪುಗಾರರ ಸಂಘದ ಅಧ್ಯಕ್ಷ ಬುಟ್ಟಿಯಂಡ ಚಂಗಪ್ಪ * ಈ ಬಾರಿಯ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಚೇಂದಂಡ ತಂಡದ ಯುವ ಆಟಗಾರ ಮೋಕ್ಷಿತ್ ಪಡೆದುಕೊಂಡರು. ಈ ಆಟಗಾರನಿಗೆ ಕುಪ್ಯಚೇಲೆ, ಪೀಚೆಕತ್ತಿ ಹಾಗೂ ಮಂಡೆತುಣಿಯ ಸೆಟ್ ಅನ್ನು ಉಡುಗೊರೆಯಾಗಿ ನೀಡಿದ್ದು, ವಿಶೇಷವಾಗಿತ್ತು.

* ಹಲವಾರು ದಾನಿಗಳು ಸಾಧಕರಿಗೆ ವಿಶೇಷ ಬಹುಮಾನಗಳನ್ನು ಪ್ರಾಯೋಜಿಸಿದ್ದರು.