ಮಡಿಕೇರಿ, ಮೇ 20: ಕೊಡಗು ಫುಟ್ಬಾಲ್ ಅಕಾಡೆಮಿ ಮರಗೋಡು ವತಿಯಿಂದ ನಡೆಯುತ್ತಿರುವ ಫುಟ್ಬಾಲ್ ಪಂದ್ಯಾಟದಲ್ಲಿ 9 ತಂಡಗಳು ಮುನ್ನಡೆ ಸಾಧಿಸಿವೆ.
ಇಂದು ನಡೆದ ಪಂದ್ಯಾಟದಲ್ಲಿ ಬೊಳ್ಳೂರು ‘ಬಿ’ ಪಡಿಕಲ್ಲು ವಿರುದ್ಧ ಜಯ ಸಾಧಿಸಿತು. ಕಮಲ್ 3, ತೀರ್ಥ 1, ಮೋನಿಷ್ 2 ಗೋಲು ಬಾರಿಸಿದರು. ಹೊಸೋಕ್ಲು ‘ಬಿ’ ತಂಡ ದಂಬೆಕೋಡಿ ತಂಡವನ್ನು ಸೋಲಿಸಿತು. ಹೊಸೋಕ್ಲು ಪರ ನಿತಿನ್ 3, ಪುನಿತ್ 1 ಗೋಲು ಗಳಿಸಿದರು. ಪೊಕ್ಕುಳಂಡ್ರ ತಂಡ ದೇವಜನ ತಂಡದ ವಿರುದ್ಧ ಸೋಲನುಭವಿಸಿತು. ದೇವಜನ ಪರ ಪುನಿತ್ 1 ಗೋಲು ಗಳಿಸಿದರು.
ತೆಕ್ಕಡೆ ತಂಡ ಕರ್ಣಯ್ಯನ ತಂಡದ ವಿರುದ್ಧ ಸೋಲನುಭವಿಸಿತು. ತೆಕ್ಕಡೆ ಪರ ಲೋಹಿತ್ 1, ಕರ್ಣಯ್ಯನ ಪರ ಈಶ್ವರ್ 2, ಭರತ್ 1 ಗೋಲು ಬಾರಿಸಿದರು. ಪಟ್ಟೆಮನೆ ತಂಡ ತೋಟಂಬೈಲು ತಂಡದ ವಿರುದ್ಧ ಪೆನಾಲ್ಟಿ ಶೂಟ್‍ಔಟ್‍ನಲ್ಲಿ ಸೋಲನುಭವಿಸಿತು.
ಮುಕ್ಕಾಟಿ ‘ಎ’ ತಂಡ ಕಟ್ರತನ ವಿರುದ್ಧ ಗೆಲುವು ಸಾಧಿಸಿತು. ಮುಕ್ಕಾಟಿ ತಂಡದ ಪರ ದಿಲಿಪ್ 1, ಪುನಿತ್ 2, ವಿಕ್ಕಿ 1 ಗೋಲು ಬಾರಿಸಿದರು. ಕಲ್ಲುಮುಟ್ಲು ತಂಡದ ವಿರುದ್ಧ ಇಟ್ಟಣಿಕೆ ತಂಡ ಗೆಲುವು ಸಾಧಿಸಿತು. ಇಟ್ಟಣಿಕೆ ತಂಡದ ಪರ ಪವನ್ 1, ಕಲ್ಲುಮುಟ್ಲು ಪರ ಭವನ್ 1 ಗೋಲು ಬಾರಿಸಿದರು.
ಬೊಳ್ಳೂರು ‘ಬಿ’ ತಂಡ ಬೈಲೋಳಿ ತಂಡದ ವಿರುದ್ಧ ಜಯ ಸಾಧಿಸಿತು. ಬೊಳ್ಳೂರು ಪರ ಮೋನಿಷ್ 1, ತೀರ್ಥ 1 ಗೋಲು ಬಾರಿಸಿದರು.
ಪರಿಚನ ‘ಎ’, ಹೊಸೋಕ್ಲು ‘ಬಿ’, ದೇವಜನ, ಕರ್ಣಯ್ಯನ, ಕಟ್ಟೆಮನೆ, ಮುಕ್ಕಾಟಿ ‘ಎ’, ಇಟ್ಟಣಿಕೆ, ಬೊಳ್ಳೂರು ‘ಬಿ’ ತಂಡಗಳು ಮುಂದಿನ ಹಂತ ಪ್ರವೇಶಿಸಿವೆ.