ಮಡಿಕೇರಿ, ಮೇ 20: ವರ್ಷಂಪ್ರತಿ ನಡೆಯುವ ಹಾಗೆ ಈ ವರ್ಷವೂ ಪೊನ್ನಂಪೇಟೆ ಸಮೀಪದ ನಡಿಕೇರಿ ಗ್ರಾಮದ ಶ್ರೀ ಅಯ್ಯಪ್ಪ ದೇವರ ವಾರ್ಷಿಕ ಬೇಡು ಹಬ್ಬವು ತಾ. 22, 23 ರಂದು ನಡೆಯಲಿದೆ. ತಾ. 22 ರಂದು ರಾತ್ರಿ ಊರಿನ ಪ್ರತಿ ಮನೆಯಲ್ಲೂ ದೇವರ ಆಟ ಹಾಗೂ ತಾ. 23 ರಂದು ಪೊನಂದರೇ ಕುದುರೆ ತೆಗೆಯುವದು ಹಾಗೂ ಭಂಡಾರ ಕಟ್ಟುವ ಕೈಂಕರ್ಯಗಳು ನಡೆಯಲಿದೆ.