ಮಡಿಕೇರಿ, ಮೇ 20: ಇತ್ತೀಚಿನ ವರ್ಷಗಳಲ್ಲಿ ಕೊಡಗಿನ ನದಿ ಪಾತ್ರಗಳಲ್ಲಿ ಜನಪ್ರಿಯತೆಯೊಂದಿಗೆ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ರ್ಯಾಫ್ಟಿಂಗ್ ಚಟುವಟಿಕೆಯನ್ನು ಅತ್ಯುತ್ತಮವಾಗಿ ರೂಪಿಸುವ ದಿಸೆಯಲ್ಲಿ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರ ಅಧ್ಯಕ್ಷತೆಯಲ್ಲಿ ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಗಿದೆ. ಈ ದಿಸೆಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಮಹತ್ವ ನೀಡುವದರೊಂದಿಗೆ ವೇಗವಾಗಿ ಬೆಳೆಯುತ್ತಿರುವ ರ್ಯಾಫ್ಟಿಂಗ್‍ಗೆ ಇನ್ನಷ್ಟು ಪಾರದರ್ಶ ಕವಾಗಿ ಜನಾಕರ್ಷ ಣೆಗೊಳಿಸಲು ಮತ್ತು ಸೂಕ್ತ ನಿರ್ವಹಣೆಯ ದೃಷ್ಟಿಯಿಂದ ಮೇಲುಸ್ತುವಾರಿ ಸಮಿತಿ ರಚಿಸಲಾಗಿದೆ ಎಂದು ಸಂಬಂಧಿಸಿದ ಪ್ರವಾಸೋ ದ್ಯಮ ಇಲಾಖೆಯ ಅಧಿಕಾರಿ ಜಗನ್ನಾಥ್ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.
ಕಳೆದೆರಡು ತಿಂಗಳಿನಿಂದ ಜಿಲ್ಲೆಯಲ್ಲಿ ರ್ಯಾಫ್ಟಿಂಗ್ ಚಟುವಟಿP Éಯನ್ನು ಸಂಪೂರ್ಣ ನಿರ್ಬಂಧಿಸಿದ್ದ ಬೆನ್ನಲ್ಲೇ ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಯ ನೂರಾರು ಕುಟುಂಬಗಳು ಉದ್ಯೋಗ ವಂಚಿತರಾಗಿ ಸಮಸ್ಯೆ ಯಲ್ಲಿ ಸಿಲುಕಿದ್ದ ಕುರಿತು ಪರಿಶೀಲನೆ ಯೊಂದಿಗೆ ಜಿಲ್ಲಾಡಳಿತ ಈ ನಿರ್ಧಾರ ತೆಗೆದುಕೊಂಡಿದೆ. ರ್ಯಾಫ್ಟಿಂಗ್ ಮೇಲುಸ್ತುವಾರಿ ನಿರ್ವಹಣಾ ಸಮಿತಿಯಲ್ಲಿ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದು, ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯನಿರ್ವ ಹಿಸಲಿದ್ದಾರೆ.
ಈ ಸಮಿತಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷರು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರರು, ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿಗಳು, ಉಪ ವಿಭಾಗಾಧಿಕಾರಿ, ಅಗ್ನಿ ಶಾಮಕ ಅಧಿಕಾರಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರು ಸೇರಿದಂತೆ ಪ್ರಮುಖರು ಸದಸ್ಯರು ಗಳಾಗಿದ್ದಾರೆ.
ಮಾತ್ರವಲ್ಲದೆ ಈಗಾಗಲೇ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರ್ಯಾಫ್ಟಿಂಗ್ ಮಾಲೀಕರ ಸಂಘದ ಇಬ್ಬರು ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮೂಲಗಳ ಪ್ರಕಾರ ಈ ಇಬ್ಬರು ಸದಸ್ಯರು ಪ್ರಸಕ್ತ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾವೇರಿ ನದಿ ಪಾತ್ರ ಹಾಗೂ ಬರಪೊಳೆ ನದಿ ಪಾತ್ರದ ರ್ಯಾಫ್ಟಿಂಗ್ ಮಾಲೀಕರಿಂದ ಸಮ್ಮತಿಯೊಂದಿಗೆ ಜಿಲ್ಲಾ ನಿರ್ವಹಣಾ ಸಮಿತಿ ಸದಸ್ಯರಾಗಿದ್ದು, ಷರತ್ತುಗಳಿಗೆ ಒಳಪಟ್ಟು ಕಾರ್ಯನಿರ್ವಹಿಸಲಿದ್ದಾರೆ. ಮುಖ್ಯವಾಗಿ ರ್ಯಾಫ್ಟಿಂಗ್ ಚಟುವಟಿಕೆ ಹೆಚ್ಚು ಜನಪ್ರಿಯವಾಗಿ ಮತ್ತು ಪಾರದರ್ಶಕವಾಗಿ ಪ್ರವಾಸಿಗಳಿಗೆ ಅನುಕೂಲ ಕಲ್ಪಿಸುವಂತಿರಬೇಕು ಎಂಬದು ಸಮಿತಿಯ ಆಶಯ.
ಅಲ್ಲದೆ, ಪ್ರವಾಸಿಗರಿಗೆ ಯಾವದೇ ತೊಂದರೆ ಎದುರಾಗ ದಂತೆ ನಿಗಾ ವಹಿಸುವದು ಮತ್ತು ಅಂತಹವರಿಂದ ರ್ಯಾಫ್ಟಿಂಗ್ ಸಿಬ್ಬಂದಿಗಳಿಗೂ ಸಮಸ್ಯೆ ಎದುರಾಗದಂತೆ ಪಾರದರ್ಶಕ ವ್ಯವಸ್ಥೆಯಡಿ ನೀತಿ - ನಿಯಮಗಳನ್ನು ಈ ಸಮಿತಿಯಿಂದ ಜಂಟಿಯಾಗಿ ರೂಪಿಸಲಾಗುವದು ಎಂದು ಮೂಲಗಳಿಂದ ಗೊತ್ತಾಗಿದೆ.
ಇದರೊಂದಿಗೆ ಭವಿಷ್ಯದಲ್ಲಿ ಮುಖ್ಯವಾಗಿ ಕೊಡಗಿನ ಪ್ರವಾಸೋ ದ್ಯಮ ವ್ಯವಸ್ಥೆಯಲ್ಲಿ ರ್ಯಾಫ್ಟಿಂಗ್‍ಗೆ ಪ್ರಾಮುಖ್ಯತೆ ಕಲ್ಪಿಸುವದು ಜಿಲ್ಲಾಡಳಿತದಿಂದ ರೂಪಿಸಿರುವ ನಿರ್ವಹಣಾ ಸಮಿತಿಯ ಆದ್ಯತೆ ಯೆಂದು ಸಂಬಂಧಿಸಿದ ಮೂಲಗಳು ತಿಳಿಸಿವೆ.
ಅಲ್ಲದೆ, ಯಾರಿಗೂ ಪ್ರವಾಸೋದ್ಯಮ ಅವಲಂಬಿಸಿ ನಡೆಸುವ ಚಟುವಟಿಕೆಗಳಿಂದ ಕಹಿ ಅನುಭವ ಉಂಟಾಗದಂತೆ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಿರ್ಮಿಸಿರುವ ಮೇಲುಸ್ತುವಾರಿ ಸಮಿತಿ ಕಾರ್ಯನಿರ್ವ ಹಣೆಯೊಂದಿಗೆ ಕಾಲ ಕಾಲಕ್ಕೆ ಸಭೆಗಳನ್ನು ನಡೆಸಿ ಸಂಬಂಧಪಟ್ಟ ರ್ಯಾಫ್ಟಿಂಗ್ ಉದ್ದಿಮೆದಾರರು ಮತ್ತು ಉದ್ಯೋಗಿಗಳಿಗೆ ತಿಳುವಳಿಕೆ ನೀಡಲಿದ್ದು, ಸದ್ಯದಲ್ಲೇ ಸಮಿತಿ ಅಧೀಕೃತವಾಗಿ ರ್ಯಾಫ್ಟಿಂಗ್‍ಗೆ ಮರು ಅವಕಾಶ ಕಲ್ಪಿಸಲಿರುವದಾಗಿ ‘ಶಕ್ತಿ’ಗೆ ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.