ನಾಪೆÉÇೀಕ್ಲು, ಮೇ. 21: ಸಮೀಪದ ಪೇರೂರು ಗ್ರಾಮದ ಕೀಯಲ್ ಕೇರಿ ಬೀರ ದೇವಳದಲ್ಲಿ ಮೂರು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುತ್ತಿರುವ ಬೀರ ದೇವರ ಹಬ್ಬವು ತಾ. 22 ರಿಂದ 23 ರವರೆಗೆ ನಡೆಯಲಿದೆ. 22 ರಂದು ಮಧ್ಯಾಹ್ನ 2 ಗಂಟೆಗೆ ಮಾಣಿಚ್ಚ ಬೀರ ಕೋಲ, ಮಾದಯ್ಯ ಬೀರ ಕೋಲ ನಡೆಯಲಿದೆ. ಅದೇ ರಾತ್ರಿ 9 ಗಂಟೆಗೆ ಭಕ್ತಾಧಿಗಳಿಗೆ ಅನ್ನದಾನ ಏರ್ಪಡಿಸಲಾಗಿದ್ದು, 10 ಗಂಟೆಗೆ ಅಪ್ಪಣ್ಣ ಬೀರ ದೇವರ ಕೋಲ ಮತ್ತು ಮೂಂದ್ ಕೂಟ್ ಮೂರ್ತಿ ದೇವರ ಕೋಲ 23ರ 7 ಗಂಟೆಯವರೆಗೆ ನಡೆಯಲಿದ್ದು, ನಂತರ ದೇವರಿಗೆ ಬಲಿ ಕಾರ್ಯಕ್ರಮ ನಡೆಯಲಿದೆ. ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಮಂಡಳಿ ಮತ್ತು ತಕ್ಕ ಮುಖ್ಯಸ್ಥರು ಕೋರಿ ಕೊಂಡಿದ್ದಾರೆ.