ಮಡಿಕೇರಿ, ಮೇ 26 : ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ಮರಗೋಡು ವತಿಯಿಂದ ನಡೆಯುತ್ತಿರುವ ಗೌಡ ಫುಟ್ಬಾಲ್ ಪಂದ್ಯಾವಳಿಯಲ್ಲಿ ತಾ. 27ರಂದು (ಇಂದು) ಕಾಂಗೀರ ಹಾಗೂ ಕಟ್ಟೆಮನೆ, ಬಡುವಂಡ್ರ ಹಾಗೂ ಪೊನ್ನಚ್ಚನ ತಂಡಗಳ ನಡುವೆ ಸೆಮಿಫೈನಲ್ ಹಣಾಹಣಿ ನಡೆಯಲಿದ್ದು, ನಂತರ ಫೈನಲ್ ಪಂದ್ಯಾಟ ನಡೆಯಲಿದೆ.ಇಂದು ನಡೆದ ಫ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೋರೆಕುಂಜಿಲನ ತಂಡ ಕೋಚನ ತಂಡವನ್ನು ಸೋಲಿಸಿತು. ಪೋರೆಕುಂಜಿಲನ ಸಚಿನ್ 1 ಗೋಲು ಬಾರಿಸಿದರು. ಪೊನ್ನಚ್ಚನ ತಂಡ ಯಾಲದಾಳು ತಂಡವನ್ನು ಮಣಿಸಿತು. ಪೊನ್ನಚ್ಚನ ಪರ ಮಹೇಶ್ 1, ಪ್ರಶಾಂತ್ 1 ಹಾಗೂ ಶ್ರೀನಿ 2 ಗೋಲು ದಾಖಲಿಸಿದರು. ಬಡುವಂಡ್ರ ತಂಡ ಟೈಬ್ರೇಕರ್ನಲ್ಲಿ ಪಾಣತ್ತಲೆ ತಂಡವನ್ನು ಸೋಲಿಸಿತು. ಪಾಣತ್ತಲೆ ವಿಕ್ರಂ 1, ಬಡುವಂಡ್ರ ಮಿಲನ್ 1 ಗೋಲುಗಳಿಸಿದರು. ಕಡ್ಯದ ತಂಡ ಅಯ್ಯಂಡ್ರ ತಂಡವನ್ನು ಸೋಲಿಸಿತು.(ಮೊದಲ ಪುಟದಿಂದ) ಕಡ್ಯದ ಪ್ರವೀಣ್ 1 ಗೋಲು ಬಾರಿಸಿದರು.ಕ್ವಾರ್ಟರ್ ಫೈನಲ್ನಲ್ಲಿ ಕಟ್ಟೆಮನೆ ತಂಡ ಬೊಳ್ಳೂರು ತಂಡವನ್ನು ಸೋಲಿಸಿತು. ಕಟ್ಟೆಮನೆ ಪ್ರೀತಂ 1, ಅಭ್ಯುದ್ 1 ಗೋಲುಗಳಿಸಿದರು. ಕಾಂಗೀರ ತಂಡ ಮುಕ್ಕಾಟಿ ತಂಡವನ್ನು ಸೋಲಿಸಿತು. ಕಾಂಗಿರ ಗೌತಮ್ 1 ಗೋಲು ಬಾರಿಸಿದರು. ಪೊನ್ನಚ್ಚನ ತಂಡ ಪೋರೆಕುಂಜಿಲನ ತಂಡವನ್ನು ಸೋಲಿಸಿತು. ಪೋರೆಕುಂಜಿಲನ ಪ್ರಶಾಂತ್ 1, ಪೊನ್ನಚ್ಚನ ಪ್ರಶಾಂತ್ 2, ಶ್ರೀನಿವಾಸ್ 2, ಕವನ್ 1 ಗೋಲು ಬಾರಿಸಿದರು. ಬಡುವಂಡ್ರ ತಂಡ ಕಡ್ಯದ ತಂಡವನ್ನು ಸೋಲಿಸಿತು. ಬಡುವಂಡ್ರ ಸುಜಯ್ 2 ಗೋಲು ಬಾರಿಸಿದರು.
ತಾ. 27ರಂದು (ಇಂದು) ಬೆಳಿಗ್ಗೆ 9.30ಕ್ಕೆ ಮೊದಲ ಸೆಮಿಫೈನಲ್ನ್ನು ಮರಗೋಡು ಗ್ರಾ.ಪಂ. ಸದಸ್ಯ ಮುಂಡೋಡಿ ನಂದ ನಾಣಯ್ಯ, ಕಟ್ಟೆಮನೆ ಧನಂಜಯ ಉದ್ಘಾಟಿಸುವರು. ಎರಡನೇ ಸೆಮಿಫೈನಲ್ನ್ನು ಮರಗೋಡು ವಿಎಸ್ಎಸ್ಎನ್ ಅಧ್ಯಕ್ಷ ಬಾಳೆಕಜೆ ಯೋಗೇಂದ್ರ, ಕಟ್ಟೆಮಾಡು ಕಾಫಿ ಬೆಳೆಗಾರ ತೋಟಂಬೈಲು ಪ್ರದೀಪ್ ಉದ್ಘಾಟಿಸುವರು. ಮೂರು ಮತ್ತು ನಾಲ್ಕನೆ ಸ್ಥಾನಕ್ಕೆ ನಡೆಯುವ ಪಂದ್ಯಾಟವನ್ನು ಮರಗೋಡು ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ಬಡುವಂಡ್ರ ಲಕ್ಷ್ಮೀಪತಿ, ಹೊಸ್ಕೇರಿ ಗ್ರಾ.ಪಂ. ಸದಸ್ಯ ಮುಕ್ಕಾಟಿ ಚಿದಂಬರ ಉದ್ಘಾಟಿಸುವರು.
ಮಧ್ಯಾಹ್ನ 2.30 ಗಂಟೆಗೆ ಫೈನಲ್ ಪಂದ್ಯವನ್ನು ಗೌಡ ಸಮಾಜ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಉದ್ಘಾಟಿಸುವರು. ಅರೆಭಾಷೆ ಸಂಸ್ಕøತಿ ಸಾಹಿತ್ಯ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭವನ್ನು ಬೆಂಗಳೂರು ಬಿಬಿಎಂಪಿ ನಿವೃತ್ತ ಜಂಟಿ ಆಯುಕ್ತ ಪಾಣತ್ತಲೆ ಪಳಂಗಪ್ಪ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಗೌಡ ಫುಟ್ಬಾಲ್ ಅಕಾಡೆಮಿ ಸಂಸ್ಥಾಪಕ ಕಟ್ಟೆಮನೆ ರಾಕೇಶ್ ವಹಿಸುವರು. ಬರಹಗಾರ, ಸಮಾಜ ಸೇವಕ ಅನಂತರಾಜುಗೌಡ ಮುಖ್ಯ ಭಾಷಣ ಮಾಡುವರು. ಅತಿಥಿಗಳಾಗಿ ವಕೀಲ ಯಾಲದಾಳು ಮನೋಜ್ ಬೋಪಯ್ಯ, ಉದ್ಯಮಿಗಳಾದ ತೇನನ ರಾಜೇಶ್, ಚೆರಿಯಮನೆ ರತ್ನಾಕರ್, ಜಿ.ಪಂ. ಮಾಜಿ ಅಧ್ಯಕ್ಷೆ ದೀರ್ಘಕೇಶಿ ಶಿವಣ್ಣ, ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಮತ್ತಿತರರು ಭಾಗವಹಿಸುವರು.