ಮಡಿಕೇರಿ, ಮೇ 27: ಬಿ.ಜೆ.ಪಿ.ಯನ್ನು ಅಧಿಕಾರದಿಂದ ಹೊರಗಿಡಲು ಜಾತ್ಯತೀತ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆ.ಡಿ.(ಎಸ್) ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರಕಾರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಿರುವದು ಪ್ರಜಾಪ್ರಭುತ್ವಕ್ಕೆ ಸಂದÀ ವಿಜಯವಾಗಿದೆ ಎಂದು ಹಿರಿಯ ರಾಜಕೀಯ ಮುತ್ಸದ್ಧಿ ಎ.ಕೆ. ಸುಬ್ಬಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.

ಪತ್ರಿಕಾ ಹೇಳಿಕೆ ಬಿಡುಗಡೆ ಗೊಳಿಸಿರುವ ಅವರು, ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಅವರು ಇದೀಗ ವಿಶ್ವಾಸಮತವನ್ನು ಗೆಲ್ಲುವದರ ಮೂಲಕ ವಿಧಾನ ಸಭೆಯಲ್ಲಿ ಬಹುಮತ ಸಾಬೀತು ಮಾಡಿರುವದು ಕರ್ನಾಟಕದ ಪ್ರಜಾತಂತ್ರಸ್ನೇಹಿ ಜನತೆಯಲ್ಲಿ ಹರ್ಷ ಮೂಡಿಸಿದೆ.

ಬಂದ್ ಕರೆ ರೈತರ ಹಿತದೃಷ್ಠಿಯಿಂದ ಅಲ್ಲ: ಚುನಾವಣೆಯ ಫÀಲಿತಾಂಶ ಪ್ರಕಟಗೊಳ್ಳುವ ಮೊದಲೇ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ದಿನಾಂಕ ಮತ್ತು ಸ್ಥಳವನ್ನು ನಿಗದಿಮಾಡಿ ಅದನ್ನು ಘೋಷಣೆ ಮಾಡಿಕೊಂಡಿದ್ದ ಬಿ.ಎಸ್. ಯಡಿಯೂರಪ್ಪನವರು ಕೊನೆಗೆ ಅಧಿಕಾರ ಕೈಗೆ ಎಟುಕದಿದ್ದಾಗ ಇದೀಗ ಅರಚಾಡುತ್ತಿರುವದು ಖೇದಕರ. 24 ಗಂಟೆಯೊಳಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡದಿದ್ದರೆ ಕರ್ನಾಟಕ ಬಂದ್ ಆಚರಿಸ ಬೇಕೆಂದು ವಿಧಾನಸಭೆಯ ಪ್ರತಿಪಕ್ಷದ ನಾಯಕರೂ ಆಗಿರುವ ಬಿ. ಎಸ್. ಯಡಿಯೂರಪ್ಪ ಅವರು ಕರೆ ನೀಡಿರುವದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅಪಚಾರವಾಗಿದೆ ಎಂದು ಹೇಳಿರುವ ಎ.ಕೆ. ಸುಬ್ಬಯ್ಯ ಅವರು, ಬಿ.ಎಸ್. ಯಡಿಯೂರಪ್ಪ ಅವರು ನೀಡಿರುವ ಈ ಬಂದ್ ಕರೆ ತನ್ನ ರಾಜಕೀಯ ಎದುರಾಳಿಗಳ ಮೇಲೆ ಸೇಡು ತೀರಿಸಿಕೊಳ್ಳುವ ದಕ್ಕಾಗಿಯೇ ಹೊರತು ಇವರಿಗೆ ರೈತರ ಮೇಲಿರುವ ಕಾಳಜಿ ಮತ್ತು ರೈತರ ಹಿತದೃಷ್ಠಿಯ ಹಿನ್ನೆಲೆಯಿಂದ ಅಲ್ಲ ಎಂದಿದ್ದಾರೆ.

ಬಂದ್ ಅನ್ನು ನಿರಾಕರಿಸಿ ಪ್ರತಿರೋಧಿಸಬೇಕು: ಬಿ.ಎಸ್. ಯಡಿಯೂರಪ್ಪ ಅವರ ಬಂದ್ ಕರೆಯನ್ನು ತಾವು ಉಗ್ರವಾಗಿ ಖಂಡಿಸುವದಾಗಿ ತಿಳಿಸಿರುವ ಎ.ಕೆ. ಸುಬ್ಬಯ್ಯ ಅವರು, ಬಂದ್ ಆಚರಣೆ ಸಂವಿಧಾನ ವಿರೋಧಿ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯ ಈಗಾಗಲೇ ತೀರ್ಪು ನೀಡಿದೆ. ಬಿ. ಎಸ್. ಯಡಿಯೂರಪ್ಪ ಅವರು ಕರೆ ನೀಡಿದ ಬಂದ್ ಆಚರಿಸಲ್ಪಟ್ಟು ಈ ಬಂದ್ ಹಿನ್ನೆಲೆ ಯಾವದೇ ನಷ್ಟ-ಕಷ್ಟಗಳು, ಅನಾಹುತಗಳು, ಸಾರ್ವಜನಿಕ ಮತ್ತು ಜನರ ಆಸ್ತಿಪಾಸ್ತಿಗಳಿಗೆ ಹಾನಿ ಸಂಭವಿಸಿದರೆ ಅದಕ್ಕೆಲ್ಲಾ ಬಿ. ಎಸ್. ಯಡಿಯೂರಪ್ಪ ಅವರನ್ನೇ ಹೊಣೆಗಾರರ ನ್ನಾಗಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.