ಮಡಿಕೇರಿ, ಮೇ 27: ಜೀವನದಿ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನಕ್ಕೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ವಾಹನ ಜಾಥಾ ಶ್ರೀರಂಗಮ್‍ಗೆ ತಲಪಿದ್ದು, ಅಲ್ಲಿನ ಕಾವೇರಿ ಡೆಲ್ಟಾ ಫಾರ್ಮರ್ಸ್ ಅಸೋಸಿಯೇಷನ್ ಪ್ರಮುಖರಾದ ಸುಬ್ರಮಣ್ಯನ್, ಗಾಂದಿಪಿಟ್ಟನ್, ಸುಕುಮಾರ್, ಮಾರುತಪಿಳ್ಳೈ ಮತ್ತಿತರರು ಜಾಥಾವನ್ನು ಬರಮಾಡಿಕೊಂಡರು.