ಮಡಿಕೇರಿ, ಮೇ 27: 2018ನೇ ಸಾಲಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ) ಪೊನ್ನಂಪೇಟೆ ಇಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಎಲೆಕ್ಟ್ರಾನಿಕ್ ಮೆಕಾನಿಕ್ ಮತ್ತು ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮ್ ಅಷಿಸ್ಟಂಟ್ ವೃತ್ತಿಗಳ ಪ್ರವೇಶಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಯನ್ನು ಸಲ್ಲಿಸಲು ಜೂನ್ 8 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ತಿತಿತಿ.emಠಿಣಡಿg.ಞಚಿಡಿ,ಟಿiಛಿ.iಟಿ ಅಥವಾ ಪ್ರಾಚಾರ್ಯರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ) ಪೊನ್ನಂಪೇಟೆ ದೂರವಾಣಿ ಸಂಖ್ಯೆ 08274-249638, 9880252218 ಸಂಪರ್ಕಿಸಬಹುದಾಗಿದೆ.