ಮಡಿಕೇರಿ, ಮೇ 27: ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಕ್ರಿಕೆಟ್ ಉತ್ಸವದ 19ನೇ ವರ್ಷದ ಪಂದ್ಯಾವಳಿಯಾಗಿ ಈ ಬಾರಿ ಮಂಜಿನನಗರಿ ಮಡಿಕೇರಿಯಲ್ಲಿ ಪ್ರಥಮ ಬಾರಿಗೆ ನಡೆದ ಮಡ್ಲಂಡ ಕಪ್‍ಗೆ ಕಳಕಂಡ ತಂಡ ಮುತ್ತಿಕ್ಕಿದೆ. ಹಾಲಿ ಚಾಂಪಿಯನ್ ತಂಡವಾಗಿದ್ದ ಕಳಕಂಡ ತಂಡ ಇದೇ ಪ್ರಥಮ ಬಾರಿಗೆ ಫೈನಲ್ ಪ್ರವೇಶಿಸಿ ಚೊಚ್ಚಲ ಪ್ರಶಸ್ತಿಗಳಿಸುವ ಕನಸು ಕಂಡಿದ್ದ ತಂಬುಕುತ್ತಿರ ತಂಡವನ್ನು ಪರಾಭವಗೊಳಿಸುವದರೊಂದಿಗೆ ಸತತ ಎರಡನೇ ಬಾರಿಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ತಂಬುಕುತ್ತಿರ ತಂಡ ಉತ್ತಮ ಹೋರಾಟ ನಡೆಸಿತ್ತಾದರೂ ಕೊನೆಯ ಹಂತದಲ್ಲಿ ಎಡವುದರೊಂದಿಗೆ ರನ್ನರ್ಸ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಕಳಕಂಡ ತಂಡ ತಂಬುಕುತ್ತಿರ ವಿರುದ್ಧ 21 ರನ್‍ಗಳ ಜಯದೊಂದಿಗೆ ಚಾಂಪಿಯನ್ ಪಟ್ಟ ಉಳಿಸಿಕೊಂಡಿತು.ದಕ್ಷಿಣಕೊಡಗಿನ ಬಿರುನಾಣಿ - ಪರಕಟಗೇರಿಯವರಾದ ಮರೆನಾಡ್ ಎಂದು ಕರೆಯುವ ಪ್ರದೇಶಕ್ಕೆ ಸೇರಿದ ಕಳಕಂಡ ಹಾಗೂ ಉತ್ತರ ಕೊಡಗಿನಲ್ಲಿ ಬರುವ ನೆರೆಜಿಲ್ಲೆ ಸುಬ್ರಹ್ಮಣ್ಯ ದೇಗುಲದ ಒತ್ತಿನಲ್ಲಿ ಬರುವ ಸೂರ್ಲಬ್ಬಿನಾಡ್‍ಗೆ ಸೇರಿದ ತಂಬುಕುತ್ತಿರ ಜಿಲ್ಲೆಯ ಎರಡು ಮೂಲೆಗಳ
(ಮೊದಲ ಪುಟದಿಂದ) ತಂಡವಾಗಿ ಈ ಬಾರಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಡೆದ ಮಡ್ಲಂಡ ಕಪ್‍ನ ಫೈನಲ್ ಪ್ರವೇಶಿಸಿದ್ದು, ವಿಶೇಷವಾಗಿತ್ತು.
ಕಳಕಂಡ ತಂಡ ಕಳೆದ ವರ್ಷದ ಬಾಳಲೆಯಲ್ಲಿ ನಡೆದ ಅಳಮೇಂಗಡ ಕಪ್‍ನ ಚಾಂಪಿಯನ್ ತಂಡವಾಗಿದ್ದು, ಅಲ್ಲಿನ ಅಭಿಮಾನಿಗಳು ಖಾಸಗಿ ಬಸ್ ಸೇರಿದಂತೆ ವಿವಿಧ ವಾಹನಗಳಲ್ಲಿ ಹುಮ್ಮನಸ್ಸಿನಿಂದ ಆಗಮಿಸಿದ್ದರು. ಇವರೊಂದಿಗೆ ತಂಬುಕುತ್ತಿರ ಅಭಿಮಾನಿಗಳೂ ಉತ್ಸಾಹದಿಂದ ಪಂದ್ಯಾವಳಿ ಆಯೋಜಿತಗೊಂಡಿದ್ದ ನಗರದ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಜಮಾಯಿಸಿದ್ದರು. ಇತ್ತಂಡಗಳ ಅಭಿಮಾನಿಗಳ ಪ್ರೋತ್ಸಾಹದ ನಡುವೆ ನಡೆದ ಅಂತಿಮ ಪಂದ್ಯ ಪ್ರೇಕ್ಷಕರಿಗೂ ಮುದ ನೀಡಿತು.
ತಂಬುಕುತ್ತಿರಕ್ಕೆ 135 ರನ್‍ಗಳ ಗುರಿ
ಟಾಸ್‍ಗೆದ್ದ ತಂಬುಕುತ್ತಿರ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. 15 ಓವರ್‍ಗಳ ಈ ಪಂದ್ಯದಲ್ಲಿ ಕಳಕಂಡ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಕಳಕಂಡ ನಿಕಿಲ್ 27 ಎಸೆತಗಳಲ್ಲಿ 41, ರಾಕಿನ್ 14 ಎಸೆತಗಳಲ್ಲಿ 25 ಹಾಗೂ ಮಧು 9 ಎಸೆತಗಳಲ್ಲಿ ಸಿಡಿಸಿದ 24 ರನ್‍ಗಳ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿ ತಂಬುಕುತ್ತಿರಕ್ಕೆ 135 ರನ್‍ಗಳ ಗುರಿ ನೀಡಿತ್ತು.
ಈ ಮೊತ್ತವನ್ನು ಬೆನ್ನಟ್ಟಿದ ತಂಬುಕುತ್ತಿರ ಆಟಗಾರರು 10 ಓವರ್‍ಗಳ ತನಕವೂ ಉತ್ತಮ ಸಾಧನೆ ತೋರುವದರೊಂದಿಗೆ ವಿಜಯಲಕ್ಷ್ಮಿ ಯಾರ ಕೊರಳಿಗೆ ಒಲಿಯಲಿದೆ ಎಂಬದು ಕೌತುಕ ಸೃಷ್ಟಿಸಿತ್ತು. ಆದರೆ ಕಳಕಂಡ ತಂಡದ ಕರಾರುವಕ್ಕಾದ ಬೌಲಿಂಗ್ ಎದುರು ಪದೇ ಪದೇ ವಿಕೆಟ್ ಕಳೆದುಕೊಳ್ಳಲಾರಂಭಿಸಿದ ತಂಬುಕುತ್ತಿರ ಬ್ಯಾಟ್ಸ್‍ಮೆನ್‍ಗಳು ಫೈನಲ್ ಪಂದ್ಯ ಮುಗಿದ ಬಳಿಕ ಕುಶಾಲನಗರದ ಬೈಕ್ ಸವಾರರ ತಂಡದಿಂದ ಬೈಕ್ ಸ್ಟಂಟ್ ಪ್ರದರ್ಶನ ನಡೆಯಿತು. ಪಂದ್ಯ ಮುಗಿದ ತಕ್ಷಣ ವಿಜೇತ ಕಳಕಂಡ ಕುಟುಂಬದ ಬೆಂಬಲಿಗರು - ಅಭಿಮಾನಿಗಳು ಕುಟುಂಬದ ಧ್ವಜ - ಬ್ಯಾಂಡ್ ವಾದನದೊಂದಿಗೆ ಮೈದಾನದ ಸುತ್ತಲೂ ಕುಣಿಯುತ್ತಾ ಸಂಭ್ರಮಾಚರಣೆ ಮಾಡಿದರು.ಫೈನಲ್ ಪಂದ್ಯ ಆರಂಭಕ್ಕೆ ಮುನ್ನ ಮುಕ್ಕೋಡ್ಲುವಿನ ವ್ಯಾಲಿಡ್ಯೂ ಅಸೋಸಿಯೇಷನ್ ತಂಡದ ಸದಸ್ಯರಿಂದ ಕ್ರಿಕೆಟ್ ಮೈದಾನದಲ್ಲಿ ಸಾಂಸ್ಕøತಿಕ ಪ್ರದರ್ಶನ ನಡೆಯಿತು. ಉಮ್ಮತ್ತಾಟ್, ಬೊಳಕಾಟ್, ಕೋಲಾಟ್, ಚೌರಿಯಾಟ್ ಪ್ರದರ್ಶನದೊಂದಿಗೆ ಅಜ್ಜಮಕ್ಕಡ ಸಹೋದರಿಯರಾದ ಪೂಜಾ ಕಾವೇರಮ್ಮ ಹಾಗೂ ಪುನೀತಾ ಪೂವಮ್ಮ ಅವರಿಂದ ನಡೆದ ನೃತ್ಯ ಪ್ರದರ್ಶನ ಗಮನ ಸೆಳೆಯಿತು.ಕಳೆದುಕೊಂಡು ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ತಂಬುಕುತ್ತಿರ ಅನಿಲ್ 23, ಸುಖೇಶ್ 17, ಮಧು 15, ಮದನ್ 13, ಮಿಲನ್ 12 ರನ್ ಗಳಿಸಿದರು.
ಕಳಕಂಡ ತಂಡದ ಭರತ್ ಹ್ಯಾಟ್ರಿಕ್ ಸಹಿತ ನಾಲ್ಕು ವಿಕೆಟ್ ಹಾಗೂ ಪ್ರಸನ್ನ 3 ವಿಕೆಟ್ ಪಡೆದು ಸಾಧನೆ ತೋರಿದರು. ತಂಬುಕುತ್ತಿರ ಮಿಲನ್ 2, ಸುಖೇಶ್ ಹಾಗೂ ಮದನ್ ತಲಾ ಒಂದೊಂದು ವಿಕೆಟ್ ಗಳಿಸಿದರೆ, ನಾಲ್ವರು ರನ್ ಔಟ್ ಆಗಿದ್ದು ವಿಶೇಷವಾಗಿತ್ತು.
ಪಂದ್ಯದ ತೀರ್ಪುಗಾರರಾಗಿ ಪೊರ್ಕೊಂಡ ಸುನಿಲ್ ಹಾಗೂ ಪಾಸುರ ಕಿಶೋರ್ ಕಾರ್ಯನಿರ್ವಹಿಸಿದರು. ಚಂಡೀರ ರಚನ್ ಚಿಣ್ಣಪ್ಪ, ಕಾಳೆಯಂಡ ಜೀವನ್ ಹಾಗೂ ಬಾಳೆಯಡ ದಿವ್ಯ ವೀಕ್ಷಕ ವಿವರಣೆ ನೀಡಿದರು. ಸಬ್ಬುಡ ಕಾರ್ಯಪ್ಪ ಸ್ಕೋರರ್ ಆಗಿ ಕಾರ್ಯನಿರ್ವಹಿಸಿದರು.
ಮುಂದಿನ ವರ್ಷ ಪೊರ್‍ಕೋಂಡ ಕಪ್
ಕೌಟುಂಬಿಕ ಕ್ರಿಕೆಟ್ ಉತ್ಸವದ 2019ರ ಪಂದ್ಯಾಟವನ್ನು ಚೆಂಬೆಬೆಳ್ಳೂರಿನ ಪೊರ್‍ಕೋಂಡ ಕುಟುಂಬಸ್ಥರು ವೀರಾಜಪೇಟೆಯಲ್ಲಿ ಆಯೋಜಿಸಲಿದ್ದಾರೆ. ಇಂದು ಪೊರ್‍ಕೋಂಡ ಕುಟುಂಬಸ್ಥರು ದುಡಿಕೊಟ್ಟ್ ಪಾಟ್‍ನೊಂದಿಗೆ ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿ ಕೊಡವ ಕ್ರಿಕೆಟ್ ಅಕಾಡೆಮಿ ಹಾಗೂ ಮಡ್ಲಂಡ ಕುಟುಂಬದವರಿಂದ ಧ್ವಜ ಸ್ವೀಕರಿಸಿದರು.