ವೀರಾಜಪೇಟೆ, ಮೇ 27: ಬೆಂಗಳೂರಿನ ಮಲ್ಲಸಂದ್ರ ಪ್ರದೇಶದ ಕೆ.ಎಸ್.ಎಸ್.ಸಿ.ಎಂ. ಇಂಜಿನಿಯ ರಿಂಗ್ ಕಾಲೇಜಿನ ಎರಡನೇ ವರ್ಷದ ವಿದ್ಯಾರ್ಥಿ ಕೊಡಗು ಮೂಲದ ಅಗಿನ್ (19) ಎಂಬಾತ ಇಂದು ಬೆಳಿಗ್ಗೆ ತಾನು ತಂಗಿದ್ದ ಕೊಠಡಿ ಯಲ್ಲಿಯೇ ಹಗ್ಗದಿಂದ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರು ವದಾಗಿ
(ಮೊದಲ ಪುಟದಿಂದ) ಬೆಂಗಳೂರಿನ ತಲಘಟ್ಟಪುರದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ವೀರಾಜಪೇಟೆಯ ತೆಲುಗರ ಬೀದಿಯಿಂದ ನೆಹರೂ ನಗರಕ್ಕೆ ಹೋಗುವ ರಸ್ತೆಯ ನಿವಾಸಿ ಹಾಗೂ ಬಿಲ್ಡಿಂಗ್ ಕಂಟ್ರಾಕ್ಟರ್ ಎಸ್. ಪವಿತ್ರನ್ ಎಂಬವರ ಎರಡನೇ ಪುತ್ರ ಕಳೆದ ಎರಡು ವರ್ಷಗಳಿಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು. ಕಾಲೇಜಿನ ಸಮೀಪದಲ್ಲಿದ್ದ ನಿತೀಶ್ಅಪಾರ್ಟ್‍ಮೆಂಟ್‍ನಲ್ಲಿ ಮೂವರು ಸಂಗಡಿಗರು ಸೇರಿ ಬಾಡಿಗೆ ಮನೆ ಮಾಡಿಕೊಂಡಿದ್ದು ಇಂದು ಬೆಳಿಗ್ಗೆ ಕೊಠಡಿಯಲ್ಲಿ ಯಾರೂ ಇಲ್ಲದ ಸಮಯವನ್ನು ಸಾಧಿಸಿ ಅಗಿನ್ ಆತ್ಮಹತ್ಯೆ ಮಾಡಿಕೊಂಡಿರುವದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.ಅಗಿನ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಡೆತ್‍ನೋಟ್ ಬರೆದಿಟ್ಟಿದ್ದು ಇದು ಪೊಲೀಸರ ಕೈಗೆ ದೊರೆತಿದೆ. ‘ನನ್ನ ಸಾವಿಗೆ ಯಾರೂ ಕಾರಣರಲ್ಲ, ನಾನೇ ಕಾರಣ, ತಲೆನೋವಿನಿಂದ ಬಳುತ್ತಿದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು’ ಎಂದು ಡೆತ್‍ನೋಟ್ ಬರೆದಿಡಲಾಗಿದೆ ಎಂದು ತಲಘಟ್ಟಪುರದ ಪೊಲೀಸ್ ಠಾಣೆಯ ಶಿವಸ್ವಾಮಿ ತಿಳಿಸಿದ್ದಾರೆ.
ಭಾನುವಾರ ಸಂಜೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಪೊಲೀಸರು ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಿ ವಾರಿಸುದಾರರಿಗೆ ಹಸ್ತಾಂತರಿಸಿದರು.