ಮಡಿಕೇರಿ, ಮೇ 27: ಜಿಲ್ಲೆಯಲ್ಲಿ ಕೊಡವ ಕುಟುಂಬಗಳ ನಡುವೆ ಹಾರ್ಡ್‍ಬಾಲ್ ಕ್ರಿಕೆಟ್ ಪಂದ್ಯಾಟ ಆಯೋಜಿಸುವ ಚಿಂತನೆಯಿದ್ದು, ಇದಕ್ಕೆ ಹಲವು ವರ್ಷಗಳಿಂದ ಪ್ರಯತ್ನ ನಡೆಸಲಾಗುತ್ತಿದೆ, ಈ ಪ್ರಯತ್ನ ಮುಂದುವರಿಯಲಿದ್ದು, ಇದಕ್ಕೆ ಕ್ರೀಡಾಭಿಮಾನಿಗಳ ಸಹಕಾರ ಅಗತ್ಯವಿದೆ ಎಂದು ಎಚ್.ಬಿ.ಓ. ಕಾರ್ಟೂನ್ ನೆಟ್‍ವರ್ಕ್, ಪೋಗೋ ಚಾನೆಲ್‍ನ ಸೀನಿಯರ್ ಡೈರೆಕ್ಟರ್ ಚೇರಂಡ ಕಿಶನ್ ಹೇಳಿದರು.

ನಗರದ ಫೀ.ಮಾ. ಕಾರ್ಯಪ್ಪ ಮೈದಾನದಲ್ಲಿ ನಡೆದ ಮಡ್ಲಂಡ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಮಡ್ಲಂಡ ಕ್ರಿಕೆಟ್ ಕಪ್‍ನ ಸಮಾರೋಪ ಸಮಾರಂಭ ಕುಟುಂಬದ ಪಟ್ಟೆದಾರ ಮಡ್ಲಂಡ.ಬಿ. ಪೊನ್ನಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.

ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಮಾತನಾಡಿ, ಮಳೆಯ ನಡುವೆಯೂ ಪಂದ್ಯಾಟ ವನ್ನು ಉತ್ತಮವಾಗಿ ಆಯೋಜಿ ಸಲು ಎಲ್ಲ ತಂಡಗಳು ಸಹಕಾರ ನೀಡಿವೆÉ. ಪಂದ್ಯಾಟಕ್ಕೆ ಸಹಕಾರ ನೀಡಿದ ಎಲ್ಲರೂ ಕ್ರೀಡಾಭಿಮಾನ ತೋರಿರುವದಾಗಿ ಹೇಳಿದರು.

ಕೊಡಗಿನಲ್ಲಿ ಅತ್ಯುತ್ತಮ ಮಟ್ಟದಲ್ಲಿ ಕ್ರಿಕೆಟ್ ಆಯೋಜಿಸಲು ಪ್ರಯತ್ನಿಸ ಲಾಗುತ್ತಿದ್ದು, ಕ್ರೀಡಾಭಿಮಾನಿಗಳು ಇದಕ್ಕೆ ಸಹಕಾರ ನೀಡಬೇಕು ಎಂದು ಪಂದ್ಯಾವಳಿ ನಿರ್ದೇಶಕ ಪೋರ್ಕೋಂಡ ಸುನೀಲ್ ಮನವಿ ಮಾಡಿದರು.

ಅಜ್ಜಮಕ್ಕಡ ಪುನೀತ ಪೂವಮ್ಮ ಪ್ರಾರ್ಥಿಸಿ, ಮಡ್ಲಂಡ ಕ್ರಿಕೆಟ್ ಕಪ್ ಅಧ್ಯಕ್ಷ ಮೊನೀಶ್ ಸ್ವಾಗತಿಸಿದರು. ಬಾಳೆಯಡ ದಿವ್ಯ ಮಂದಪ್ಪವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ಫೈನಲ್ ಪಂದ್ಯದ ಬಳಿಕ ಅತಿಥಿಗಳು ಹಾಗೂ ಮಡ್ಲಂಡ ಕುಟುಂಬಸ್ಥರು ವಿಜೇತರಿಗೆ ಬಹುಮಾನ ವಿತರಿಸಿದರು.