ವೀರಾಜಪೇಟೆ, ಮೇ 28: ಕಾಡಾನೆ ಹಾವಳಿಯನ್ನು ವೈಜ್ಞಾನಿಕವಾಗಿ ಶಾಶ್ವತವಾಗಿ ನಿಯಂತ್ರಿಸಲು ಹಾಗೂ ಪರಿಹಾರಕ್ಕಾಗಿ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ರೈತರು, ಕಾರ್ಮಿಕರು ಹಾಗೂ ಅರಣ್ಯ ಹೋರಾಟ ಸಮಿತಿಯ ಬೇಡಿಕೆಗಳ ಬಗ್ಗೆ ಚರ್ಚಿಸಿ ರೈತರ ಸಮಸ್ಯೆಗಳಿಗೆ ಮುಕ್ತ ಪರಿಹಾರ ಕಂಡುಕೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ವೀರಾಜಪೇಟೆ ವಿಭಾಗ ಅರಣ್ಯ ಕಚೇರಿಯ ಸಭಾಂಗಣದಲ್ಲಿ ಕೊಡಗು ಜಿಲ್ಲಾ ರೈತ ಸಂಘ ಹಾಗೂ ಕಾರ್ಮಿಕರ ಅರಣ್ಯ ಹೋರಾಟ ಸಮಿತಿ ಆಯೋಜಿಸಲಾಗಿದ್ದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯಲ್ಲಿ ಮಾತನಾಡಿದ ಜೆಡಿಎಸ್ ಅಧ್ಯಕ್ಷ ಸಂಕೇತ್ ಪೂವಯ್ಯ ಅವರು ಕೊಡಗಿನಲ್ಲಿ ಕಾಡಾನೆ ಧಾಳಿಯಿಂದ 41 ಮಂದಿ ಬಲಿಯಾಗಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು, ಧಾಳಿಯಿಂದ ಮನೆ ಮಾಲೀಕನಿಂದ ಅನಾಥಗೊಂಡ ಪತ್ನಿ, ಮಕ್ಕಳಿಗೆ ಕನಿಷ್ಟ ಸಾಂತ್ವನ ಹೇಳುವಷ್ಟು ಮಾನವೀಯತೆಯನ್ನು ಹೊಂದಿಲ್ಲ ಇದು ವಿಷಾದನೀಯ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶದಿಂದ ಹೇಳಿದರು. ಕಾಡಾನೆ ಹಾವಳಿಯಿಂದ 41 ಮಂದಿ ಬಲಿಯೊಂದಿಗೆ ನೂರಾರು

(ಮೊದಲ ಪುಟದಿಂದ) ಮಂದಿ ಅಂಗ ವೈಫಲ್ಯದಿಂದ ಬಳಲುತ್ತಿದ್ದಾರೆ. ಹಿಂದಿನ ಸರಕಾರದ ಅರಣ್ಯ ಮಂತ್ರಿ ನಿಷ್ಕ್ರಿಯ ಆದ ಕಾರಣ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಕಾರ್ಮಿಕರು ದಿನದ ಗಂಜಿಗಾಗಿ ತೋಟದಲ್ಲಿ ದುಡಿಯುವ ಸಮಯದಲ್ಲಿ ಕಾಡಾನೆ ಧಾಳಿ ಮಾಡುತ್ತಿದೆ. ಹಿಂದಿನ ಸರಕಾರ ಇದಕ್ಕೆ ಸ್ಪಂದಿಸಿಲ್ಲ, ಇಲಾಖೆಯ ಉನ್ನತಾಧಿಕಾರಿಗಳು, ರೈತರು, ಕಾರ್ಮಿಕರ ಅರಣ್ಯ ಹೋರಾಟ ಸಮಿತಿ ಮುಖ್ಯಮಂತ್ರಿ ಸಮ್ಮುಖದಲ್ಲಿ ಚರ್ಚಿಸಲಾಗುವದು ಕುಮಾರಸ್ವಾಮಿ ಅವರು ವೀರಾಜಪೇಟೆಯಲ್ಲಿ ಪಕ್ಷದ ಸಮಾವೇಶದಲ್ಲಿ ಸಮಸೆÀ್ಯಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವದು ಎಂದು ಕಾಳಜಿ ತೋರಿದ್ದರು ಎಂದು ಹೇಳಿದರು.

ರೈತಸಂಘದ ಜಿಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ ಕಳೆದ 4ತಿಂಗಳ ಹಿಂದೆ ರ್ಯೆತರ ಸಮಸ್ಯೆಗಳ ಬಗ್ಗೆ ಜಿಲ್ಲೆಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅಧಿಕಾರಿಗಳು ನಿರ್ಲಕ್ಷ್ಯ ತೋರಿದ ಕಾರಣ ಉನ್ನತಾಧಿಕಾರಿಗಳ ಸಮ್ಮುಖದಲ್ಲಿ ಇಂದು ಸಭೆ ನಡೆಸುವ ಅನಿವಾರ್ಯ ಒದಗಿ ಬಂತು. ವನ್ಯ ಜೀವಿಗಳನ್ನು ನಾಡಿಗೆ ಬಾರದಂತೆ ಕಾಡಿಗೆ ಅಟ್ಟುವದು ಹಾಗೂ ನಷ್ಟ ಪರಿಹಾರದ ಸಂಬಂಧ ಸೂಕ್ತ ಪರಿಹಾರ ಒದಗಿಸುವ ಬೇಡಿಕೆ ಇಡಲಾಗಿತ್ತು. ಆದರೂ ಏನು ಪ್ರಯೋಜನವಾಗಿಲ್ಲ. ನಮ್ಮ ಮನವಿಗೆ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆ ಕೂಡಲೆ ಸ್ಪಂದಿಸಬೇಕು. ರೈತರು ಹಾಗೂ ಕಾರ್ಮಿಕರ ಬೇಡಿಕೆಗಳಿಗೆ ನೇರವಾಗಿ ಸ್ಪಂದಿಸಬೇಕು ಎಂದು ಅಧಿಕಾರಿಗಳ ಸಮ್ಮುಖದಲ್ಲಿ ಆಗ್ರಹಿಸಿದರು.

ಸಂರಕ್ಷಣಾಧಿಕಾರಿ ಭರವಸೆ

ವಿವಿಧ ಸಂಘಟನೆಗಳಿಂದ ರೈತರ ಸಮಸ್ಯೆಗಳನ್ನು ಆಲಿಸಿದ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಮಾತನಾಡಿ ರೈತರ, ಕಾರ್ಮಿಕ ಅರಣ್ಯ ಹೋರಾಟ ಸಮಿತಿಯ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಲಾಗುವದು. ಹೊಸ ಸರ್ಕಾರದ ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ಹಾಗೂ ಅರಣ್ಯ ಇಲಾಖಾ ಹಿರಿಯ ಅಧಿಕಾರಿಗಳ ಜೊತೆಯಲ್ಲಿ ಚರ್ಚಿಸಿ ಸಂಘಟನೆಗಳ ಬೇಡಿಕೆಗಳನ್ನು ಈಡೇರಿಸಲಾಗುವದು. 1976ರಿಂದಲೇ ಅರಣ್ಯ ಪ್ರದೇಶ ಕೇಂದ್ರ ಸರ್ಕಾರದ ಸ್ವಾಧೀನದಲ್ಲಿದ್ದು ಕೆಲವು ಬೇಡಿಕೆಗಳನ್ನು ಯೋಜನೆಗಳ ಮೂಲಕ ಈಡೇರಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವದು. ಎಂದು ಹೇಳಿದರು.

ಕೊಡಗು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ಮಾತನಾಡಿ ಕಾಡಾನೆಗಳ ತಡೆಗಾಗಿ ಮಾಲ್ದಾರೆಯಿಂದ ಕುಶಾಲನಗರದವರೆಗೆ ಆಯ್ದ 4 ಕಿ.ಮೀ. ಭಾಗಗಳಲ್ಲಿ ರ್ಯೆಲ್ವೆ ಬ್ಯಾರಿಕೇಡ್‍ಗಳನ್ನು ಹಾಕಲು ಯೋಜನೆ ಜಾರಿಗೊಳಿಸಲಾಗಿದೆ. ಸದ್ಯದಲ್ಲಿಯೇ 4ಕೋಟಿ ವೆಚ್ಚದ ಕಾವiಗಾರಿ ಆರಂಭಗೊಳ್ಳಲಿದೆ. ಸಂಘಟನೆಗಳ ಬೇಡಿಕೆಗಳನ್ನು ಪರಿಶೀಲಿಸಲಾಗಿದೆ ಬೇಡಿಕೆ ಈಡೇರಿಕೆಗಾಗಿ ಸರಕಾರದ ಗಮನಕ್ಕೆ ತರಲಾಗುವದು. ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರೈತ ಸಂಘದ ಸಂಚಾಲಕ ಮಂಡೇಪಂಡ ಪ್ರವೀಣ್ ಬೋಪಯ್ಯ, ಉಪಾಧ್ಯಕ್ಷ ಕೆ.ಎಂ ಕುಶಾಲಪ್ಪ, ಕೆ.ವಿ ಹೇಮಚಂದ್ರ, ಕೆ,ವಿ ಸುನೀಲ್, ಭರತ್ ಅದೇಂಗಡ ಅಶೋಕ್, ಶಂಕರು, ರಮೇಶ್, ನಂದಾ ಗಣಪತಿ, ಸಿ.ಕೆ.ಪೂವಣ್ಣ ಬಿ.ಡಿ.ಸುಬ್ಬಯ್ಯ, ಬೋಸ್ ಮಂದಣ್ಣ, ಅರ್ಜುನ್, ಲೋಕೇಶ್ ಮತ್ತಿತರರು ಕಾಡಾನೆ ಉಪಟಳ ರೈತರು ಕಾರ್ಮಿಕರು ಬೆಳೆಗಾರರು ಮಂಗ, ಕಾಡಾನೆ, ಹುಲಿ, ನಿರಂತರ ಉಪಟಳ ಕುರಿತು ಮಾತನಾಡಿದರು. ಸಭೆಯಲ್ಲಿ ಮಡಿಕೇರಿ ವಿಭಾಗ ಅರಣ್ಯಧಿಕಾರಿ ಮಂಜುನಾಥ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಿವಿಧ ವಲಯಗಳ ರೇಂಜರ್‍ಗಳು, ಸಂಘಟನೆಯ ಕೊಡ್ಲಿಪೇಟೆ, ಸೋಮವಾರಪೇಟೆ ಸೇರಿದಂತೆ ಕೊಡಗಿನ ವಿವಿಧ ಭಾಗಗಳಿಂದ ರೈತರು, ಬೆಳೆಗಾರರು, ಕಾರ್ಮಿಕರ ಪ್ರತಿನಿಧಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.