ಸೋಮವಾರಪೇಟೆ, ಮೇ 29: ಮಳೆಯಿಂದಾಗಿ ಮಡಿಕೇರಿ ಕ್ಷೇತ್ರದಾದ್ಯಂತ ರಸ್ತೆಗಳಲ್ಲಿ ನೀರು ಹರಿಯುತ್ತಿರುವದರಿಂದ ತಕ್ಷಣ ಎಲ್ಲಾ ರಸ್ತೆಗಳ ಬದಿಯಲ್ಲಿ ಚರಂಡಿ ನಿರ್ಮಿಸಿ, ಕಾಡು ಕಡಿಯುವ ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸಬೇಕೆಂದು ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಪತ್ರ ಬರೆದಿದ್ದಾರೆ.
ಅಸಮರ್ಪಕ ಚರಂಡಿಯಿಂದಾಗಿ ಇದೀಗ ಬೀಳುತ್ತಿರುವ ಮಳೆಗೆ ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ಇದು ಹೀಗೇ ಮುಂದುವ ರೆದರೆ ರಸ್ತೆಗೂ ಹೆಚ್ಚಿನ ಹಾನಿ ಉಂಟಾಗಲಿದೆ. ಇದರೊಂದಿಗೆ ರಸ್ತೆಯ ಇಕ್ಕೆಲಗಳಲ್ಲಿ ಕಾಡು ಬೆಳೆದಿದ್ದು, ತಕ್ಷಣ ಕಾಡು ಕಡಿದು ರಸ್ತೆ ಬದಿ ಚರಂಡಿ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ತಿಳಿಸಿದ್ದಾರೆ.
ಇದರೊಂದಿಗೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಹಾಗೂ ಜಿ.ಪಂ. ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೂ ಶಾಸಕ ರಂಜನ್ ಪತ್ರ ಬರೆದು ಕ್ರಮಕ್ಕೆ ಸೂಚಿಸಿದ್ದಾರೆ.