ಬೆಂಗಳೂರು, ಮೇ 29: ಭಾರತೀಯ ಬ್ಯಾಂಕ್‍ಗಳ ಸಂಘವು (ಐಬಿಎ) ಮುಂದಿಟ್ಟಿರುವ ವೇತನ ಪರಿಷ್ಕರಣೆ ಪ್ರಸ್ತಾವ ವಿರೋಧಿಸಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯು (ಯುಎಫ್ಬಿಯು) ತಾ. 30 ಮತ್ತು 31 ರಂದು ಎರಡು ದಿನಗಳ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಈ ಮುಷ್ಕರದಿಂದ ಗ್ರಾಹಕರ ವೇತನ ಮತ್ತು ಎಟಿಎಂ ವಹಿವಾಟಿಗೆ ಆಡಚಣೆಯಾಗುವ ಸಾಧ್ಯತೆಗಳಿವೆ.

ತಿಂಗಳ ಕೊನೆಯಾಗಿರುವದರಿಂದ ವೇತನ ಪಡೆಯುವವರಿಗೆ ತೊಂದರೆಯಾಗಲಿದೆ. ಆನ್ಲೈನ್ ಮೂಲಕ ವಹಿವಾಟು ನಡೆಸುವವರಿಗೆ ಬ್ಯಾಂಕ್ ಮುಷ್ಕರಿಂದ ಯಾವದೇ ತೊಂದರೆಯಾಗುವದಿಲ್ಲ. ನಗದು ಪಡೆದು ವಹಿವಾಟು ನಡೆಸುವವರಿಗೆ ತೊಂದರೆ ಸಾಧ್ಯ. ಗ್ರಾಹಕರು ಎಟಿಎಂಗಳನ್ನು ಹೆಚ್ಚಿಗೆ ಬಳಕೆ ಮಾಡುವದರಿಂದ ಎಟಿಎಂಗಳು ಬರಿದಾಗುವ ಸಾಧ್ಯತೆ ಇದೆ.