ಮಡಿಕೇರಿ, ಮೇ 29: ಜೀವನದಿ ಕಾವೇರಿಗೆ ಜೀವಂತ ಶಾಸನ ಕಾನೂನು ಜಾರಿಗೊಳಿಸಬೇಕೆಂದು ಆಗ್ರಹಿಸಿ ಸಿಎನ್ಸಿ ಸಂಘಟನೆ ವತಿಯಿಂದ ತಲಕಾವೇರಿಯಿಂದ ತಮಿಳುನಾಡಿನ ಪೂಂಪ್ಹಾರ್ವರೆಗೆ ಹಮ್ಮಿಕೊಂಡಿರುವ ವಾಹನ ಜಾಥಾ ಇಂದು ತಂಜಾವೂರು ತಲಪಿತು. ಅಲ್ಲಿನ ಹಳೆ ಸಿಟಿ ಬಸ್ ನಿಲ್ದಾಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು.