ಸೋಮವಾರಪೇಟೆ, ಮೇ 31: ತಾಲೂಕಿನ ಚಿಕ್ಲಿಹೊಳೆ ಜಲಾಶಯ, ಮಾದಾಪುರ ಹೊಳೆ, ಹಟ್ಟಿಹೊಳೆ ಹಾಗೂ ಆಲೂರು-ಸಿದ್ದಾಪುರ ಕೆರೆ, ಸಿಡಿಗಳಲೆ ಮಠದ ಕೆರೆ, ನಿಡ್ತ ಜೋಡು ಕೆರೆ, ದೊಡ್ಡಭಂಡಾರ ಕಾಮನಕೆರೆಗಳಲ್ಲಿ ಮೀನುಗಾರಿಕೆ ಮಾಡಲು ನೋಂದಾಯಿತ ಅರ್ಹ ಮೀನುಗಾರರ ಸಹಕಾರ ಸಂಘಗಳಿಂದ 5 ವರ್ಷಗಳ ಅವಧಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಲಾಖಾ ಕಚೇರಿಯನ್ನು ಸಂಪರ್ಕಿಸ ಬಹುದಾಗಿದೆ ಎಂದು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.