ಕೂಡಿಗೆ, ಮೇ 31: ವಿಜಯನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡಿರುವ ದಿಗಂತ್ ಎಂಬ ವಿದ್ಯಾರ್ಥಿ ವಯಸ್ಸಿನ ಆಧಾರ ಮೇಲೆ ಹಾಗೂ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ನೇರವಾಗಿ 6ನೇ ತರಗತಿಗೆ ಪ್ರವೇಶ ಪಡೆದಿದ್ದಾನೆ.

ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ನಾಲ್ಕನೇ ತರಗತಿಯಿಂದ ನೇರವಾಗಿ ಆರನೇ ತರಗತಿ ಪರೀಕ್ಷೆ ಬರೆದು, ಸೈನಿಕ ಶಾಲೆಗೆ ಆಯ್ಕೆಗೊಂಡಿರುವ ಕೊಡಗಿನ ಏಕೈಕ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ದಿಗಂತ್ ವಿಶ್ವನಾಥ್ ಹಾಗೂ ಉಮಾದೇವಿ ದಂಪತಿಗಳ ಪುತ್ರ. ಪೋಷಕರಿಬ್ಬರೂ ಸರಕಾರಿ ಶಾಲೆಯ ಶಿಕ್ಷಕರಾಗಿದ್ದಾರೆ. ವಯೋಮಿತಿ ಆಧಾರದ ಮೇಲೆ ಸೈನಿಕ ಶಾಲೆಯ 6ನೇ ತರಗತಿ ಪ್ರವೇಶ ಪರೀಕ್ಷೆಯನ್ನು ಎದುರಿಸುವ ಅವಕಾಶವಿದೆ. ಈ ಅವಕಾಶವನ್ನು ದಿಗಂತ್ ಬಳಸಿಕೊಂಡು ಆಯ್ಕೆಯಾಗಿದ್ದಾನೆ.