ಗೋಣಿಕೊಪ್ಪ ವರದಿ, ಮೇ 31: ಇಲ್ಲಿನ ಅಂಚೆ ಕಛೇರಿಯನ್ನು ಗೋಣಿಕೊಪ್ಪ-ವೀರಾಜಪೇಟೆ ಮುಖ್ಯ ರಸ್ತೆಯಲ್ಲಿರುವ ಕಾರ್ಯಪ್ಪ ಫ್ಲಾಜ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
ಈ ಹಿಂದೆ ಇದ್ದಂತಹ ಅಂಚೆ ಕಚೇರಿಯಲ್ಲಿ ವಾಹನ ನಿಲುಗಡೆ ಮತ್ತಿತರ ಕಾರಣದಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಇದರಿಂದಾಗಿ ಸಾರ್ವಜನಿಕರಿಗೆ ಪ್ರಯೋಜನ ವಾಗುವಂತೆ ಕಚೇರಿ ಸ್ಥಳಾಂತರಿಸ ಲಾಗಿದೆ ಎಂದು ಅಂಚೆ ಕಚೇರಿ ಪ್ರಕಟಣೆ ತಿಳಿಸಿದೆ.