ಗೋಣಿಕೊಪ್ಪ ವರದಿ, ಮೇ 30: ಕೊಡಗಿನಲ್ಲಿ ಮಳೆಯ ಪ್ರಮಾಣ ಹೆಚ್ಚಾಗುತ್ತಿದ್ದು, ಗೋಣಿಕೊಪ್ಪ, ಮೈಸೂರು ಹೆದ್ದಾರಿಯ ತಿತಿಮತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆಯ ಒತ್ತಿನಲ್ಲಿರುವ ಹಳೆಯ ಸೇತುವೆ ಕುಸಿದು ಬೀಳುವ ಆತಂಕ ಮೂಡಿಸಿದೆ.ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ಸೇತುವೆ ಮೇಲೆ ನೀರು ಹರಿದರೆ ಕುಸಿಯುವ ಆತಂಕ ಇದೆ. ಈ ರಸ್ತೆ ಮೂಲಕ ಮೈಸೂರು, ಬೆಂಗಳೂರು ಭಾಗಕ್ಕೆ ಪ್ರಯಾಣ ಬೆಳೆಸುವದರಿಂದ ಹೆಚ್ಚಿನ ವಾಹನಗಳು ಚಲಿಸುತ್ತದೆ. ಇದರಿಂದಾಗಿ ಸೇತುವೆ ಕುಸಿಯುವ ಸಂಭವ ಹೆಚ್ಚಿದ್ದು, ಈ ಬಗ್ಗೆ ಲೋಕೋಪಯೋಗಿ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.