ಕೂಡಿಗೆ, ಮೇ 31: ಕೂಡಿಗೆ-ಕೊಪ್ಪಲು, ಹೆಗ್ಗಡಳ್ಳಿ ಶ್ರೀ ದಂಡಿನಮ್ಮ ಮತ್ತು ಶ್ರೀ ಬಸವೇಶ್ವರ ಹಾಗೂ ಶ್ರೀ ಮುತ್ತತ್‍ರಾಯ ಮತ್ತು ಗ್ರಾಮಗಳ ಸೇವಾ ಸಮಿತಿ ವತಿಯಿಂದ ತಾ. 1 ರಂದು (ಇಂದು) ಗ್ರಾಮ ದೇವತೆ ಶ್ರೀ ದಂಡಿನಮ್ಮ ತಾಯಿಯವರ 26ನೇ ವರ್ಷದ ವಾರ್ಷಿಕ ಪೂಜೆ ಮತ್ತು ಜಾತ್ರೋತ್ಸವ-2018 ನಡೆಯಲಿದೆ.
ಬೆಳಿಗ್ಗೆಯಿಂದ ಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ದುರ್ಗಿ ಶಾಂತಿ ಹೋಮ, ದೇವಿಗೆ ಅಭಿಷೇಕ ಮತ್ತು 12.30ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ, ಸಂಜೆ 7.30 ರಿಂದ ಕೊಂಡ ಪೂಜಾ ಕಾರ್ಯಕ್ರಮ, ಹಣ್ಣಾಡಗೆ ಉತ್ಸವ, ಕೊಂಡೋತ್ಸವ ಮತ್ತು ಉಯ್ಯಾಲೆ ಮಹೋತ್ಸವ ನಡೆಯಲಿದೆ.
ತಾ. 2 ರಂದು ಬೆಳಿಗ್ಗೆ 8 ಗಂಟೆಯಿಂದ ಶ್ರೀ ದಂಡಿನಮ್ಮ ತಾಯಿಗೆ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ. ತಾ. 3 ರಂದು ಶ್ರೀ ಮುತ್ತತ್‍ರಾಯ ದೇವರಿಗೆ ಬಲಿ ಪೂಜೆ ಮತ್ತು ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ನಡೆಯುತ್ತದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.