ಮಡಿಕೇರಿ, ಮೇ 31: ವೀರಾಜಪೇಟೆ ಹಳೆಯ ಖಾಸಗಿ ಕಟ್ಟಡದಿಂದ ಮಿನಿ ವಿಧಾನಸೌಧ ಕಟ್ಟಡಕ್ಕೆ ಕೆಸ್ವಾನ್ ಕಂಟ್ರೋಲ್ ರೂಂನ್ನು ಸ್ಥಳಾಂತರಿಸುವ ಕಾಮಗಾರಿ ಪ್ರಾರಂಭವಾಗಿದ್ದು, ಜೂನ್ 1 ರಿಂದ ಟವರ್ ಸ್ಥಾಪನೆ ಕೆಲಸ ಪ್ರಾರಂಭವಾಗುವದರಿಂದ ಟವರ್ ಕೆಲಸ ಪೂರ್ಣಗೊಂಡು ವಿದ್ಯುತ್ ಸಂಪರ್ಕ ಕಲ್ಪಿಸುವವರೆಗೆ ಕೆಸ್ವಾನ್ ಕಂಟ್ರೋಲ್ ರೂಂ ಪೂರ್ಣ ಬಂದ್ ಆಗಿರುತ್ತದೆ. ಭೂಮಿ ಕೇಂದ್ರ, ಉಪ ಖಜಾನೆ, ವೀರಾಜಪೇಟೆ, ಪೊನ್ನಂಪೇಟೆ, ಉಪನೋಂದಣಾಧಿಕಾರಿಗಳು, ವೀರಾಜಪೇಟೆ, ಪೊನ್ನಂಪೇಟೆ ಕಚೇರಿ ಕೆಲಸಗಳು ಸ್ಥಗಿತಗೊಳ್ಳುತ್ತದೆ ಎಂದು ವೀರಾಜಪೇಟೆ ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.