ಕೂಡಿಗೆ, ಮೇ 30: ಕೂಡಿಗೆಯ ದಂಡಿನಮ್ಮ ಮತ್ತು ಬಸವೇಶ್ವರ ದೇವಾಲಯ ಸಮಿತಿ ವತಿಯಿಂದ ದಂಡಿನಮ್ಮ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕವಾಗಿ ಬಸವೇಶ್ವರ ದೇವರ ಪೂಜಾ ಕಾರ್ಯಗಳು ಹಾಗೂ ಉತ್ಸವ ಮೆರವಣಿಗೆ ನಡೆಯಿತು.

ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಟಿ. ಕೃಷ್ಣ, ಕಾರ್ಯದರ್ಶಿ ಮಂಜುನಾಥ್, ಉಪಾಧ್ಯಕ್ಷ ರಂಗ, ಸಹಕಾರ್ಯದರ್ಶಿ ಹರೀಶ್, ಗೌರವಾಧ್ಯಕ್ಷ ಶ್ರೀನಿವಾಸ್ ಕೆ.ಟಿ., ಸಲಹೆಗಾರರಾದ ಚಂದ್ರಶೇಖರ್, ಸೋಮಶೇಖರ್, ಸಮಿತಿಯ ನಿರ್ದೇಶಕರು ಹಾಗೂ ಗ್ರಾಮಸ್ಥರು ಇದ್ದರು.