ಮಡಿಕೇರಿ, ಮೇ 31: ಭಾರತ ಸರ್ಕಾರದ ಖಾದಿ ಮತ್ತು ಗ್ರಾಮೋದ್ಯೋಗ ಮತ್ತು ಭಾಗಮಂಡಲದ ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘ ಇವರ ಜಂಟಿ ಆಶ್ರಯದಲ್ಲಿ ಭಾಗಮಂಡಲದ ಗೌಡ ಸಮಾಜ ಸಭಾಂಗಣದಲ್ಲಿ ಜೇನು ಕೃಷಿಕರಿಗೆ ಒಂದು ದಿನದ ಮಾಹಿತಿ ಶಿಬಿರ ನಡೆಯಿತು. ಈ ಶಿಬಿರದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹೊಸೂರು.ಜೆ.ಸತೀಶ್ ಕುಮಾರ್ ಅವರು ವಹಿಸಿದ್ದರು.
ಸಮಾರಂಭದ ಉದ್ಘಾಟನೆಯನ್ನು ಖಾದಿ ಗ್ರಾಮೋದ್ಯೋಗದ ಸಹಾಯಕ ನಿರ್ದೇಶಕ ಜಿ.ಎಸ್.ಆರ್.ಸುಬ್ರಮಣ್ಯಂ ನೆರವೇರಿಸಿದರು. ಆಯೋಗದ ಸಹಾಯಕ ನಿರ್ದೇಶಕ ಮೋಸೆಸ್ ಸಿಂಗ್, ತೋಟಗಾರಿಕೆ ಇಲಾಖೆಯ ಜೇನುಕೃಷಿ ಪ್ರದರ್ಶಕ ಬಿ.ಡಿ.ವಸಂತ ಅವರು ಆಗಮಿಸಿ ಕೃಷಿಕರಿಗೆ ಅನೇಕ ಉಪಯುಕ್ತ ಮಾಹಿತಿ ನೀಡಿದರು. ಫಲಾನುಭವಿಗಳಿಗೆ ಶೇ.80 ರಿಯಾಯಿತಿ ದರದಲ್ಲಿ ಜೇನು ಪರಿಕರಗಳನ್ನು ನೀಡುವದಾಗಿ ತಿಳಿಸಿದರು.