ಮಡಿಕೇರಿ, ಮೇ. 31: ತಿಳಿದು ಅಥವಾ ತಿಳಿಯದೆ ಮಾದಕ ವಸ್ತುಗಳ ವ್ಯಸನಿಗಳಾಗಿ ಅಪರಾಧಗಳನ್ನು ಎಸಗುವ ಮೂಲಕ ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿರುವ ಮಂದಿ, ಅಂತಹ ಚಟಗಳಿಂದ ಮುಕ್ತರಾಗಿ ಸಮಾಜದಲ್ಲಿ ಹೊಸ ಬದುಕು ರೂಪಿಸಿಕೊಳ್ಳಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಾಡ್ಲೂರು ಸತ್ಯ ನಾರಾಯಣಾಚಾರ್ಯ ಅವರು ಕರೆ ನೀಡಿದರು.ನಗರದ ಹೊರವಲಯದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಇಂದು ಜಿಲ್ಲಾ ಕಾನೂನು ಪ್ರಾಧಿಕಾರ, ವಕೀಲರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹುಟ್ಟಿನಿಂದ ಯಾರೂ ತಪ್ಪು ಮಾಡದಿದ್ದರೂ, ಸಮಾಜ ವ್ಯವಸ್ಥೆಯಲ್ಲಿ ಕೆಲವೊಮ್ಮೆ ಸ್ವಯಂ ಆಗಿ ದುಶ್ಚಟಕ್ಕೆ ಒಳಗಾಗಿ ಅಥವಾ ಕೆಲವರ ಸಹವಾಸದಿಂದ ದುಷ್ಕøತ್ಯಗಳಲ್ಲಿ ಸಿಲುಕುವದು ಸಾಮಾನ್ಯವೆÀಂದು ವ್ಯಾಖ್ಯಾನಿಸಿದರು.
ತಂಬಾಕಿಗೆ ಪ್ರೋತ್ಸಾಹ: ಒಂದೆಡೆ ರೈತಾಪಿ ವರ್ಗಕ್ಕೆ ತಮ್ಮ ಹೊಲಗಳಲ್ಲಿ ಆರ್ಥಿಕ ನೆರವು ನೀಡಿ ತಂಬಾಕು ಬೆಳೆಯಲು ಪ್ರೋತ್ಸಾಹಿಸುವದು ಕಂಡು ಬಂದರೆ, ಕಾನೂನಿನಲ್ಲಿ ತಂಬಾಕು ಸೇವನೆ ಅಪರಾಧವೆಂದು ಹೇಳಲಾಗುತ್ತಿದ್ದು, ಈ ದುಶ್ಚಟ ಅಥವಾ ತಂಬಾಕು ಉತ್ಪನ್ನ ಸೇವಿಸುವಾತ ತಾನು ಹಾಳಾಗುವದರೊಂದಿಗೆ ತನ್ನ ಸಂಸಾರವನ್ನು ಮಾರಕ ರೋಗಗಳಿಗೆ ದೂಡುತ್ತಾರೆ ಎಂದು ಬೊಟ್ಟು ಮಾಡಿದರು. ಈ ದಿಸೆಯಲ್ಲಿ ಎಚ್ಚೆತ್ತುಕೊಂಡು ಪ್ರತಿಯೊಬ್ಬರು ದುವ್ರ್ಯಸನಿಗಳಾಗದೆ ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸ್ಪಂದಿಸುವಂತೆ ನ್ಯಾಯಾಧೀಶರು ತಿಳಿಹೇಳಿದರು.
ಅಪರಾಧ ಬಯಸುವದಿಲ್ಲ : ಕೌಟುಂಬಿಕ ಜೀವನದಲ್ಲಿ ಯಾರೇ ದುಷ್ಚಟಗಳಿಗೆ
(ಮೊದಲ ಪುಟದಿಂದ) ಬಲಿಯಾಗಿ ಅಪರಾಧಗಳನ್ನು ಎಸಗಿದರೆ, ಅಂತಹ ಸದಸ್ಯನ ಇಡೀ ಕುಟುಂಬ ಸಮಾಜದಲ್ಲಿ ತಲೆ ತಗ್ಗಿಸಬೇಕಾಗುತ್ತದೆಯಾದ್ದರಿಂದ ಯಾರೊಬ್ಬರೂ ಈ ದುಸ್ಥಿತಿಗೆ ನಿಮ್ಮವರನ್ನು ತಳ್ಳಬೇಡಿ ಎಂದು ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ನ್ಯಾಯಾಧೀಶೆ ನೂರುನ್ನೀಸಾ ತಿಳಿ ಹೇಳಿದರು.
ಪ್ರತಿಯೊಬ್ಬರು ಹುಟ್ಟಿನಿಂದ ಒಳ್ಳೆಯ ಆರೋಗ್ಯಪೂರ್ಣ ಜೀವನದೊಂದಿಗೆ ಒಳ್ಳೆಯ ಮರಣವನ್ನೇ ಅಪೇಕ್ಷಿಸಿದರೂ, ತಮ್ಮಿಂದಾಗುವ ಅಪರಾಧಗಳಿಂದ ಇಡೀ ಕುಟುಂಬವನ್ನು ಸಮಾಜದ ಮುಂದೆ ತಲೆ ತಗ್ಗಿಸುವಂತೆ ಮಾಡಿಬಿಡುತ್ತೇವೆ ಎಂದು ಬೊಟ್ಟುಮಾಡುತ್ತಾ, ಜನ್ಮಕೊಟ್ಟ ತಂದೆ- ತಾಯಿ ಅಥವಾ ಒಡಹುಟ್ಟಿದವರಿಗೆ ಸಮಾಜದಲ್ಲಿ ಅಸಹಾಯಕತೆಗೆ ನೂಕಬೇಡಿ ಎಂದರು.
ದುಶ್ಚಟ ಬಿಡಿ: ವಕೀಲರ ಸಂಘದ ಅಧ್ಯಕ್ಷ ಕೆ.ಎಸ್. ಕವನ್ ಈ ವೇಳೆ ಮಾತನಾಡಿ, ಮನುಷ್ಯನ ಜೀವನಕ್ಕೆ ಅಗತ್ಯವಾದ ಉತ್ತಮ ಗಾಳಿ, ನೀರು, ಆಹಾರ ಸೇವನೆಯನ್ನು ಕಡ್ಡಾಯ ಬಿಡದೆ ಉತ್ತಮ ಬದುಕು ರೂಪಿಸಿಕೊಂಡು ಮಾಧಕವಸ್ತುಗಳ ಸೇವನೆಯಂತಹ ದುಶ್ಚಟಗಳನ್ನು ಬಿಟ್ಟುಬಿಡಿ ಎಂಬದಾಗಿ ತಿಳಿಹೇಳಿದರು.
ಕಾರಾಗೃಹ ಅಧೀಕ್ಷಕ ಕೃಷ್ಣಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ. ರಾಮಚಂದ್ರ ಕಾಮತ್ ತಂಬಾಕು ಉತ್ಪನ್ನಗಳ ಸೇವನೆಯ ದುಷ್ಪರಿಣಾಮಗಳನ್ನು ಉದಾಹರಿಸುತ್ತಾ, ಕ್ಯಾನ್ಸರ್‍ನಂತಹ ಭಯಾನಕ ಕಾಯಿಲೆಗಳಿಗೆ ಈ ಮೂಲಕ ಬಲಿಯಾಗದಂತೆ ಸಲಹೆ ಮಾಡಿದರು. ನಿವೃತ್ತ ಮೇಜರ್ ಹಾಗೂ ಗೃಹ ರಕ್ಷಕ ಕಮಾಂಡೆಂಟ್ ಓ.ಎಸ್. ಚಿಂಗಪ್ಪ, ವಕೀಲರುಗಳಾದ ಶರತ್ ಹಾಗೂ ಪುಂಡರೀಕ ಅವರುಗಳು ಭಾಗವಹಿಸಿ ತಂಬಾಕು ಸೇವನೆ ಮುಕ್ತ ಜೀವನ ಕುರಿತು ವಿವರಿಸಿದರು. ಜೈಲು ಸಿಬ್ಬಂದಿ ಸಂಪತ್ ಪ್ರಾರ್ಥನೆಯೊಂದಿಗೆ, ನ್ಯಾಯಾಲಯದ ಉದ್ಯೋಗಿ ಜಯಪ್ಪ ಕಾರ್ಯಕ್ರಮ ನಿರೂಪಿಸಿ, ಅಯ್ಯಪ್ಪ ಸ್ವಾಗತಿಸಿದರು. ಪುರುಷ ಹಾಗೂ ಮಹಿಳಾ ಸಿಬ್ಬಂದಿಗಳ ಸಹಿತ ಕಾರಾಗೃಹ ಸಿಬ್ಬಂದಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಸೋಮವಾರಪೇಟೆ : ತಂಬಾಕು ಉತ್ಪನ್ನವೇ ವಿಶ್ವದ ಬಹುದೊಡ್ಡ ದುರಂತವಾಗಿದೆ. ತಂಬಾಕು ಸೇವನೆಯಿಂದ ಹಣದೊಂದಿಗೆ ಆರೋಗ್ಯವೂ ಹಾಳಾಗುತ್ತದೆ ಎಂದು ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ್ ಎಫ್. ದೊಡ್ಡಮನಿ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಇಲ್ಲಿನ ನ್ಯಾಯಾಲಯ ಆವರಣದಲ್ಲಿ ನಡೆದ ವಿಶ್ವ ತಂಬಾಕು ರಹಿತ ದಿನ ಮತ್ತು ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯಾವದೇ ವ್ಯಕ್ತಿ ದುಶ್ಚಟಕ್ಕೆ ಬಲಿಯಾದÀರೆ ಅದು ಇಡೀ ಸಮಾಜ ವ್ಯವಸ್ಥೆಯನ್ನು ಹಾಳು ಮಾಡುತ್ತದೆ. ತಂಬಾಕು ಸೇವನೆಯಿಂದ ವಿಶ್ವದಲ್ಲಿ ಪ್ರತೀ 8 ಸೆಕೆಂಡಿಗೆ ಒಬ್ಬ ವ್ಯಕ್ತಿ ಮೃತ ಪಡುತ್ತಿದ್ದಾನೆ. ಈ ನಿಟ್ಟಿನಲ್ಲಿ ಸರಕಾರವು ನ್ಯಾಯಾಲಯಗಳ ಮೂಲಕ ಜನ ಸಾಮಾನ್ಯರಿಗೆ ಕಾನೂನಿನ ಅರಿವು ನೀಡುವದರಿಂದ ತಂಬಾಕು ರಹಿತ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್.ಎಸ್.ಭರತ್ ಮಾತನಾಡಿ, ತುಂಬಾಕು ಉತ್ಪನ್ನ ಗಳಿಂದ ಆಗುವ ದುಷ್ಪರಿಣಾಮವನ್ನು ಹೋಗಲಾಡಿಸಲು ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಕಾನೂನು ಅರಿವು, ಜನರಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ತಂಬಾಕು ವ್ಯಸನಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವದು ಅಂಕಿ ಅಂಶಗಳಿಂದ ತಿಳಿದು ಬಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದಲ್ಲಿರುವ ಕೆಲವು ಯುವತಿಯರು ಇಂತಹ ದುಶ್ಚಟಕ್ಕೆ ಬಲಿಯಾಗುತ್ತಿರುವದು ದುರಂತ. ಇಡೀ ವಿಶ್ವದಲ್ಲಿ ತಂಬಾಕು ನಿಷೇಧಿಸಬೇಕಾದ ಅಗತ್ಯತೆ ಇದೆ. ಭಾರತ ತಂಬಾಕು ರಫ್ತು ಮಾಡುವ ದೇಶಗಳಲ್ಲಿ ಮೊದಲ ಸ್ಥಾನವನ್ನು ಪಡೆದಿರುವದು ಅಚ್ಚರಿಯೆನಿಸಿದೆ ಎಂದರು.
ಕುಶಾಲನಗರ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ವೀರಾಜಪೇಟೆಯ ಕೂರ್ಗ್ ದಂತ ವೈದ್ಯಕೀಯ ಕಾಲೇಜು ಸಹಯೋಗದೊಂದಿಗೆ ಕುಶಾಲನಗರದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಾಯಿ ಕ್ಯಾನ್ಸರ್ ತಪಾಸಣೆ ಶಿಬಿರ ನಡೆಯಿತು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದ ದಂತ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿ ಕರಲ್ಲಿ ಅರಿವು ಮೂಡಿಸಿ ದರು. ಸಾರಿಗೆ ಬಸ್ ನಿಲ್ದಾಣದ ಆವರಣ ದಲ್ಲಿ ಬೀದಿ ನಾಟಕ ಪ್ರದರ್ಶನ ಮೂಲಕ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭ ಜಿಲ್ಲಾ ಸರ್ವೇಕ್ಷಣಾಧಿ ಕಾರಿ ಡಾ.ಎಂ.ಶಿವಕುಮಾರ್, ದಂತ ವೈದ್ಯಕೀಯ ಕಾಲೇಜು ಮಖ್ಯಸ್ಥ ಡಾ.ಜಿತೇಶ್, ಯೋಜನಾಧಿಕಾರಿ ಡಾ.ಆನಂದ, ಉಪನ್ಯಾಸಕರುಗಳಾದ ಡಾ.ಮಹೇಶ್, ಡಾ.ಶಶಿಧರ್, ಮನಪ್ರೀತ್ ಕೌರ್, ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್ ಇದ್ದರು.