ಗುಡ್ಡೆಹೊಸೂರು, ಮೇ 30: ಇಲ್ಲಿನ ನರೇನ್ ಸುಬ್ಬಯ್ಯ ಕ್ರೀಡಾಂಗಣದಲ್ಲಿ 18 ವರ್ಷದ ಒಳಗಿನ ಆಟಗಾರರ ಫುಟ್ಬಾಲ್ ತಂಡದ ಆಯ್ಕೆ ನಡೆಯಿತು. ಜಿಲ್ಲೆಯ ವಿವಿಧ ಭಾಗಗಳ ಸುಮಾರು 100ಕ್ಕೂ ಹೆಚ್ಚು ಕ್ರೀಡಾಪಟುಗಳು ಹಾಜರಿದ್ದರು.

20 ಮಂದಿಯನ್ನು ಆಯ್ಕೆ ಮಾಡಲಾಯಿತು. ಜೂನ್ 10 ರಿಂದ 20 ರವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ “ಊರ್ಜಾ ಕಪ್”ಗೆ ತಂಡವನ್ನು ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯವರು ಆಯ್ಕೆ ನಡೆಸಿದರು. ಈ ಸಂದರ್ಭ ಕ್ರೀಡಾಂಗಣದ ಸ್ಥಾಪಕ ಐಚ್ಚೇಟ್ಟಿರಾ ಸೋಮಯ್ಯ, ಕಾಮಿನಿ ಸೋಮಯ್ಯ ಮತ್ತು ಪುತ್ರ ಐಚ್ಚೇಟ್ಟಿರ ಪೊನ್ನಪ್ಪ ಮುಂತಾದವರು ಹಾಜರಿದ್ದರು.