ನಾಪೆÇೀಕ್ಲು, ಮೇ 31: ಕಕ್ಕಬ್ಬೆಯಿಂದ ಬೆಳಿಗ್ಗೆ 7.30ಕ್ಕೆ ಹೊರಟು ಕೊಳಕೇರಿ, ನಾಪೆÇೀಕ್ಲು, ಮೂರ್ನಾಡು ಮೂಲಕ ಮಡಿಕೇರಿಗೆ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸನ್ನು ಆರಂಭಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬೆಳಿಗ್ಗೆ 7.30 ಗಂಟೆಗೆ ಕಕ್ಕಬ್ಬೆಯಿಂದ ಕೊಳಕೇರಿ ನಾಪೆÇೀಕ್ಲು ಮಾರ್ಗವಾಗಿ ಮಡಿಕೇರಿಗೆ ತೆರಳುತ್ತಿದ್ದ ಖಾಸಗಿ ಬಸ್ ತನ್ನ ಸೇವೆಯನ್ನು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ಶಾಲಾ - ಕಾಲೇಜು ವಿದ್ಯಾರ್ಥಿಗಳು, ಸರಕಾರಿ ನೌಕರರು ಮತ್ತು ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗಿದೆ. ಬೆಳಿಗ್ಗೆ 6.15ಕ್ಕೆ ಖಾಸಗಿ ಬಸ್ ತೆರಳಿದ ನಂತರ ಈ ರಸ್ತೆಯಿಂದ ಬೆಳಿಗ್ಗೆ 9 ಗಂಟೆಯವರೆಗೆ ಯಾವದೇ ಬಸ್ ಸಂಚಾರವಿರುವದಿಲ್ಲ.
ಸಾರಿಗೆ ಇಲಾಖೆ, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಕೂಡಲೇ ಈ ಸಮಸ್ಯೆಯನ್ನು ಪರಿಗಣಿಸಿ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.