ಶನಿವಾರಸಂತೆ, ಮೇ 30: ವಿಧಾನಸಭೆ ಚುನಾವಣೆ ನಿಮಿತ್ತ ಪೊಲೀಸ್ ಠಾಣೆಯಲ್ಲಿ ಜಮೆ ಮಾಡಲಾಗಿದ್ದ ಬಂದೂಕುಗಳನ್ನು ಬಂದೂಕು ಮಾಲೀಕರು ಲೈಸೆನ್ಸ್ ಹಾಜರುಪಡಿಸಿದರೇ ಮಾತ್ರ ಹಿಂತಿರುಗಿಸಲಾಗುವದು ಎಂದು ಎಸ್‍ಐ ಎನ್. ಆನಂದ್ ತಿಳಿಸಿದ್ದಾರೆ.ಲೈಸೆನ್ಸ್ ಇಲ್ಲದಿದ್ದು ಠೇವಣಿ ಚೀಟಿ ತೋರಿಸಿದ ಮಾತ್ರಕ್ಕೆ ಬಂದೂಕು ಹಿಂತಿರುಗಿಸುವದಿಲ್ಲ. ಬಂದೂಕು ಮಾಲೀಕರು ಲೈಸೆನ್ಸ್ ಅನ್ನು ನವೀಕರಿಸಿ ಠಾಣೆಗೆ ಹಾಜರುಪಡಿಸಿ ಬಂದೂಕುಗಳನ್ನು ಹಿಂದಕ್ಕೆ ಪಡೆಯಬಹುದು. ಅಲ್ಲಿಯವರೆಗೂ ಬಂದೂಕುಗಳನ್ನು ಠಾಣೆಯಲ್ಲೇ ಇರಿಸಿಕೊಳ್ಳುವದು ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಆದೇಶಿಸಿದ್ದಾರೆ ಎಂದು ಎಸ್‍ಐ ಆನಂದ್ ಹೇಳಿಕೆ ನೀಡಿದ್ದಾರೆ.