ಗೋಣಿಕೊಪ್ಪ ವರದಿ, ಮೇ 30: ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಅಮೃತ ಮಹೋತ್ಸವ ಪ್ರಯುಕ್ತ ಆಶ್ರಮದ ವತಿಯಿಂದ ಸೇವಾಶ್ರಮ ಆಸ್ಪತ್ರೆಯಲ್ಲಿ ನಡೆದ ಉಚಿತ ಮಲ್ಟಿಸ್ಪೆಷಾಲಿಟಿ ವೈದ್ಯಕೀಯ ಶಿಬಿರದಲ್ಲಿ ನೂರಾರು ಮಂದಿ ಪಾಲ್ಗೊಂಡು ಪ್ರಯೋಜನ ಪಡೆದುಕೊಂಡರು. ಜಿಲ್ಲೆ ಸೇರಿದಂತೆ ಮೈಸೂರು, ಬೆಂಗಳೂರು ಪ್ರದೇಶಗಳಿಂದ ತಜ್ಞ ವೈದ್ಯರು ಪಾಲ್ಗೊಂಡು ತಪಾಸಣೆ ನಡೆಸಿದರು. ಕ್ಯಾನ್ಸರ್, ಕಿಡ್ನಿ, ಮೂಳೆ, ಮಹಿಳೆಯರ ಗರ್ಭಕೋಶ, ದಂತ, ಚರ್ಮರೋಗ, ಮಕ್ಕಳ ತಜ್ಞ ಸೇರಿದಂತೆ ಹಲವು ರೋಗಗಳ ತಜ್ಞರು ಪಾಲ್ಗೊಂಡು ತಪಾಸಣೆ ನಡೆಸಿದರು. ಮೈಸೂರು ಜೆಎಸ್‍ಎಸ್, ವೀರಾಜಪೇಟೆ ಡೆಂಟಲ್ ಕಾಲೇಜು, ಬೆಂಗಳೂರು ಶೇಖರಯ್ಯ ಆಸ್ಪತ್ರೆ, ಮೈಸೂರು ನಾರಾಯಣ ಹೃದಯಾಲಯ ತಂಡದಿಂದ ವಿಶೇಷ ತಂಡ ಆಗಮಿಸಿ ಪರೀಕ್ಷೆ ನಡೆಸಲಾಯಿತು.

ಮಕ್ಕಳ ತಜ್ಞರಾಗಿ ಡಾ. ದೀಪಕ್, ಕ್ಯಾನ್ಸರ್ ತಜ್ಞ ಡಾ. ಬೆಳ್ಯಪ್ಪ, ಕಿಡ್ನಿ ಸಂಬಂದಿತ ರೋಗಗಳ ತಜ್ಞ ಡಾ. ಮಂಜುನಾಥ್ ಶೆಣೈ, ಮೂಳೆ ತಜ್ಞ ಡಾ. ಮೃತ್ಯುಂಜಯ, ರೆಡಿಯೋಲಾಜಿಸ್ಟ್ ಡಾ. ಶ್ಯಾಂ ಅಪ್ಪಣ್ಣ, ಚರ್ಮ ತಜ್ಞ ಡಾ. ಅಳಮೇಂಗಡ ಬೆಳ್ಯಪ್ಪ, ಫಿಸಿಸಿಯನ್ ಡಾ. ನರಸಿಂಹನ್, ಡಾ. ಮೋಹನ್ ಅಪ್ಪಾಜಿ ತಪಾಸಣೆ ನಡೆಸಿದರು. ರಾಮಕೃಷ್ಣ ಸೇವಾಸ್ಪತ್ರೆ ರೋಗಿಗಳ ನಿರೀಕ್ಷಣಾ ಕೊಠಡಿಯನ್ನು ಸ್ವಾಮಿ ಬೋಧಸರಣಾನಂದಾಜಿ ಮಹರಾಜ್ ಉದ್ಘಾಟಿಸಿದರು. ವೈದ್ಯರುಗಳನ್ನು ಆಶ್ರಮದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭ ಆಶ್ರಮದ ವಿಶ್ರಾಂತ ಸ್ವಾಮೀಜಿ ಜಗದಾ ತ್ಮಾನಂದಾಜಿ, ಊಟಿ ರಾಮಕೃಷ್ಣ ಮಠದ ಅಧ್ಯಕ್ಷ ರಾಘವೇಶಣನಂದಾಜಿ, ಲಕ್ನೋ ರಾಮಕೃಷ್ಣ ಮಠದ ಅಧ್ಯಕ್ಷ ಮುಕ್ತಿನಾಥನಂದಾಜಿ, ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಅಧ್ಯಕ್ಷ ಬೋಧಸ್ವರೂಪ ನಂದಾಜಿ ಉಪಸ್ಥಿತರಿದ್ದರು.

ಮೈಸೂರು ಜೆಎಸ್‍ಎಸ್ ಕಾಲೇಜು ಮುಖ್ಯಸ್ಥ ಡಾ. ಬಸವಣ್ಣಗೌಡ, ಮಡಿಕೇರಿ ಕೊಡಗು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ನ ಪ್ರಬಾರ ಮುಖ್ಯಸ್ಥ ಡಾ. ಕಾರ್ಯಪ್ಪ ಪಾಲ್ಗೊಳ್ಳಲಿದ್ದಾರೆ.