ಮಡಿಕೇರಿ, ಮೇ 30: ರಾಜ್ಯದ ಎಲ್ಲಾ ಕಚೇರಿಯಲ್ಲಿ ತಾ. 25 ರಿಂದ ಸಾರಥಿ-4 ಅನುಷ್ಠಾಗೊಳ್ಳಲಿರುವದರಿಂದ ಕಲಿಕಾ ಚಾಲನಾ ಅನುಜ್ಞಾ ಪತ್ರ ಹಾಗೂ ಚಾಲನಾ ಅನುಜ್ಞಾ ಪತ್ರಕ್ಕಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಿತಿತಿ.ಠಿಚಿಡಿivಚಿhಚಿಟಿ.gov.iಟಿ ನಲ್ಲಿ ಸಾರಥಿ-4 ರಲ್ಲಿ ಸಲ್ಲಿಸಬೇಕು. ಶುಲ್ಕ ಪಾವತಿಯನ್ನು ಸಾರಥಿ-4 ರಲ್ಲಿ ಇ-ಪೇಮೆಂಟ್ ಮೂಲಕ ಪಾವತಿಸಬಹುದು ಅಥವಾ ಕಚೇರಿಯಲ್ಲಿಯೂ ಸಹ ಪಾವತಿಸಬೇಕು. ಈ ಹಿಂದೆ ಪುಸ್ತಕ ಚಾಲನಾ ಅನುಜ್ಞಾ ಪತ್ರ ಹೊಂದಿರುವ ಅಭ್ಯರ್ಥಿಗಳು ಸಾರಥಿ-4 ಸಾಫ್ಟ್‍ವೇರ್‍ನಲ್ಲಿ ನಮೂದನೆಗೊಳ್ಳದ ಕಾರಣ ಕಚೇರಿಗೆ ಹಾಜರಾಗಿ ಕೂಡಲೇ ಸ್ಮಾರ್ಟ್‍ಕಾರ್ಡ್ ಹೊಂದಿಕೊಳ್ಳಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.