ಚೆಟ್ಟಳ್ಳಿ, ಮೇ 30: ಅಭ್ಯತ್‍ಮಂಗಲದ ಪುರಾತನ ಸೇತುವೆಯ ಸಮೀಪದಲ್ಲಿ ನೂತನವಾಗಿ ನಿರ್ಮಾಣವಾದ ಸೇತುವೆಯ ಮಧ್ಯಭಾಗದಲ್ಲಿರುವ ಅಪಾಯದ ವಿದ್ಯುತ್ ಕಂಬವನ್ನು ತೆರವುಗೊಳಿಸದೆ ಲಾರಿ, ಕಾರು ಡಿಕ್ಕಿಯಾಗಿ ಅಪಾಯಕ್ಕೆ ಆಹ್ವಾನಿಸುತ್ತಿದೆ.

ಚೆಟ್ಟಳ್ಳಿ, ಕುಶಾಲನಗರ, ಸಿದ್ದಾಪುರಕ್ಕೆ ಸಂಪರ್ಕ ಕಲ್ಪಿಸುವ ಅಭ್ಯತ್‍ಮಂಗಲದ ಹಳೆಯ ಸೇತುವೆಯ ಪP್ಕÀದಲ್ಲಿ ನೂತನವಾದ ಸೇತುವೆಯನ್ನು ನಿರ್ಮಿಸಲಾಗಿದೆ. ಚುನಾವಣೆ ಹಿನ್ನೆಲೆ ಉದ್ಘಾಟನೆ ಗೊಳ್ಳದೆ ವಾಹನ ಓಡಾಡಲು ಪ್ರಾರಂಭಿಸಿವೆ. ಆದರೆ ಸೇತುವೆಯ ಮಧ್ಯದಲ್ಲೇ ಎರಡು ವಿದ್ಯುತ್ ಕಂಬಗಳು ಹಾದುಹೋಗಿವೆ. ವಾಹನ ಓಡಾಡುವ ಸಮಯದಲ್ಲಿ ಬಸ್ಸು, ಕಾರು, ಬೈಕುಗಳು ಅಪಘಾತಗಳಾಗುವ ಸಂದರ್ಭಗಳು ಎದುರಾದರೂ ಲೋಕೋಪಯೋಗಿ ಹಾಗೂ ವಿದ್ಯುತ್ ಇಲಾಖೆ ಕಂಬವನ್ನು ತೆರವುಗೊಳಿಸದೆ ಬೇವಾಬ್ದಾರಿತನವನ್ನು ತೋರುತ್ತಿದೆ.

ನೂತನ ಸೇತುವೆಯ ಮುಂಭಾಗದಲ್ಲಿರುವ ವಿದ್ಯುತ್ ಕಂಬವನ್ನು ತೆರವುಗೊಳಿಸಲು ತಗಲುವ ವೆಚ್ಚವನ್ನು ಲೋಕೋಪಯೋಗಿ ಇಲಾಖೆ ವಿದ್ಯುತ್ ಮಂಡಳಿಗೆ ಪಾವತಿಸಬೇಕಿದೆ. ಹಣಪಾವತಿಸದ ಕಾರಣ ವಿದ್ಯುತ್ ಕಂಬವನ್ನು ತೆರವುಗೊಳಿಸಲು ತಡವಾಗುತ್ತಿದೆ, ಇಲಾಖೆಗೆ ಲಿಖಿತವಾಗಿ ತಿಳಿಸಲಾಗಿ ಎಂದು ಚೆಟ್ಟಳ್ಳಿಯ ವಿದ್ಯುತ್ ಇಲಾಖಾ ಅಧಿಕಾರಿ ದಿನೇಶ್ ಹೇಳುತ್ತಾರೆ.

ಮೊನ್ನೆ ರಾತ್ರಿ ಲಾರಿ ಹಾಗೂ ಇನ್ನೋವ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಕಂಬ ಮುರಿದಿದೆ. ಯಾವದೆ ಪ್ರಾಣಾಪಾಯ ವಾಗಿಲ್ಲ ಅಪಾಯ ಅರಿತ ಸ್ಥಳಿಯರು ಕಂಬವನ್ನು ಎತ್ತಿ ಬದಿಗೆ ಸರಿಸಲು ಪ್ರಯತ್ನಿಸಿದರೂ ಪ್ರಯೋಜನವಾಗದೆ ಇಲಾಖೆಯ ಬೇಜವಾಬ್ದಾರಿ ಬಗ್ಗೆ ಸ್ಥಳಿಯರಾದ ಕೊಳಂಬೆ ವಿನುಕುಮಾರ್ ಹಾಗೂ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಸ್ತೆ ಮಧ್ಯೆ ಅಪಾಯ ಸ್ಥಿತಿಯಲ್ಲಿರುವ ಕಂಬದ ಬಗ್ಗೆ ತಾ. 29ರ ‘ಶಕ್ತಿ’ಯಲ್ಲಿ ಬೆಳಕು ಚೆಲ್ಲಿದ್ದರೂ ಸಂಬಂಧಿಸಿದ ಇಲಾಖೆ ಎಚ್ಚೆತ್ತುಕೊಳ್ಳದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. -ಕರುಣ್ ಕಾಳಯ್ಯ