ಕುಶಾಲನಗರ, ಜೂ. 1: ತಾ. 3 ರಂದು ಕುಶಾಲನಗರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಾರಂಭ ನಡೆಯಲಿದೆ. ಸ್ಥಳೀಯ ಸಮಸ್ತ ಭಜನಾ ಮಂಡಳಿ ಆಶ್ರಯದಲ್ಲಿ ಇತರ ಸಂಘಸಂಸ್ಥೆಗಳ ಸಹಯೋಗದೊಂದಿಗೆ ನಡೆಯಲಿರುವ ಕಲ್ಯಾಣೋತ್ಸವ ಕುಶಾಲನಗರ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಜರುಗಲಿದೆ.
ಈ ಸಂಬಂಧ ತಿರುಪತಿಯಿಂದ ತಾ. 2 ರಂದು (ಇಂದು) ಕುಶಾಲನಗರಕ್ಕೆ ಮಧ್ಯಾಹ್ನ 3.30 ಕ್ಕೆ ದೇವರ ವಿಗ್ರಹಗಳು ಹಾಗೂ ಯತಿವರ್ಯರ ತಂಡ ಆಗಮಿಸಲಿದ್ದು, ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಸಾಂಪ್ರದಾಯಿಕವಾಗಿ ಬರಮಾಡಿ ಕುಶಾಲನಗರ ಗಣಪತಿ ದೇವಾಲಯ ತನಕ ಮೆರವಣಿಗೆ ಸಾಗಲಿದೆ. 3 ರಂದು ಕಲ್ಯಾಣೋತ್ಸವ ಅಂಗವಾಗಿ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12.30 ರ ತನಕ ವಿಶೇಷ ಪೂಜೆ ಕಾರ್ಯಕ್ರಮ ಜರುಗಲಿದೆ. ಕಲ್ಯಾಣೋತ್ಸವ ನಂತರ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿದೆ. ಸಂಜೆ 4 ಗಂಟೆಗೆ ಉಯ್ಯಾಲೋತ್ಸವ ಕಾರ್ಯಕ್ರಮ ನಡೆಯಲಿದೆ.