ಮಡಿಕೇರಿ, ಜೂ. 1: ಇಲ್ಲಿನ ಕೋಟೆ ಆವರಣದಲ್ಲಿರುವ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಕಚೇರಿಯಲ್ಲಿ ಇಂದು ಗಣಹೋಮದೊಂದಿಗೆ ದೇವತಾ ಪೂಜೆ ನಡೆಯಿತು. ಮಡಿಕೇರಿ ಕ್ಷೇತ್ರದ ಶಾಸಕರಾಗಿ ಪುನರಾಯ್ಕೆಗೊಂಡಿರುವ ಎಂ.ಪಿ. ಅಪ್ಪಚ್ಚುರಂಜನ್ ಹಾಗೂ ಪಕ್ಷದ ಪ್ರಮುಖರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ವಿಜಯ ವಿನಾಯಕ ಅರ್ಚಕ ಕೃಷ್ಣ ಉಪಾಧ್ಯ ಅವರ ನೇತೃತ್ವದಲ್ಲಿ ದೇವತಾ ಕೈಂಕರ್ಯ ನೆರವೇರಿತು.
ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ನಗರ ಅಧ್ಯಕ್ಷ ಮಹೇಶ್ ಜೈನಿ, ಪದಾಧಿಕಾರಿಗಳಾದ ರವಿಕಾಳಪ್ಪ, ಪಿ.ಕೆ. ಶೇಷಪ್ಪ, ಮಣಿ ಉತ್ತಪ್ಪ, ಯಮುನಾ ಚಂಗಪ್ಪ, ಅನಿತಾ ಪೂವಯ್ಯ, ರೀಟಾ ಮುತ್ತಣ್ಣ ಸೇರಿದಂತೆ ವಿವಿಧ ಪ್ರಮುಖರು, ನಗರಸಭೆ ಹಾಗೂ ಸ್ಥಳೀಯ ಸಂಸ್ಥೆ ಬಿಜೆಪಿ ಪ್ರತಿನಿಧಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.