ವೀರಾಜಪೇಟೆ, ಜೂ. 1: ಭಾರತ ನೌಕಪಡೆಯ ಕಮಿಷನ್‍ಂಡ್ ಅಧಿಕಾರಿಯಾಗಿ ಸಬ್ ಲೆಫ್ಟಿನೆಂಟ್ ಕೋಡಿಮಣಿಯಂಡ ಪವನ್ ಪೊನ್ನಣ್ಣ ಆಯ್ಕೆಯಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಕೂಡಿಗೆ ಸೈನಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ ಇವರು ಕಕ್ಕಬ್ಬೆ ನಾಲಡಿ ಗ್ರಾಮದ ಕೋಡಿಮಣಿಯಂಡ ಉತ್ತಪ್ಪ ಧರಣಿ ಅವರ ಪುತ್ರರಾಗಿದ್ದಾರೆ. ಇದೀಗ ಇವರು ಕೊಚ್ಚಿನ್‍ನಲ್ಲಿ ಕಾರ್ಯನಿರ್ವಹಿಸುತ್ತಿದಾರೆ.