ನಾಪೆÇೀಕ್ಲು, ಜೂ. 11: ಇದು ಪ್ರಜಾಪ್ರಭುತ್ವ ರಾಷ್ಟ್ರ. ಆದರೆ ಪ್ರಜೆಗಳಿಂದ ಆರಿಸಿ ಬರುವ ಜನಪ್ರತಿನಿಧಿಗಳಿಗೆ ಇದರ ಅರಿವಿಲ್ಲದಿರುವದು ಮಾತ್ರ ದುರಂತ. ಇದಕ್ಕೆ ಸಾಕ್ಷಿ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಆಡಳಿತದ ಕಾರ್ಯ ವೈಖರಿ. ಪ್ರಜೆಗಳಿಗೆ, ಸಾರ್ವಜನಿಕರಿಗೆ ವ್ಯವಸ್ಥೆ ಕಲ್ಪಿಸಬೇಕಾದ ಅವರು ಇಲ್ಲಿ ಅದಕ್ಕೂ ನಮಗೂ ಯಾವದೇ ಸಂಬಂಧವಿಲ್ಲ ಎಂಬ ಧೋರಣೆ ಹೊಂದಿರುವಂತೆ ತೋರುತ್ತಿದೆ. ಮಡಿಕೇರಿ ತಾಲೂಕಿಗೆ ಎರಡನೇ ದೊಡ್ಡ ಪಟ್ಟಣ ಎಂಬ ಹೆಸರುಗಳಿಸಿದ ಈ ಗ್ರಾಮ ಪಂಚಾಯಿತಿಯಲ್ಲಿ 21 ಜನ ಸದಸ್ಯರಿದ್ದಾರೆ.

ಆದರೆ ಇಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷ ಎಂಬ ಯಾವದೇ ವ್ಯತ್ಯಾಸ ಕಂಡುಬರುತ್ತಿಲ್ಲ. ಇಲ್ಲಿನ ಅವ್ಯವಸ್ಥೆಗಳಿಗೆ ಆಡಳಿತ ಪಕ್ಷ ಮಾತ್ರ ಹೊಣೆ ಅಲ್ಲ. ಅವರ ಕಾರ್ಯ ವೈಖರಿಯನ್ನು ಪ್ರಶ್ನಿಸದ ವಿರೋಧ ಪಕ್ಷವು ಕಾರಣ ಎನ್ನುವಂತಾಗಿದೆ. ಈ ದೊಡ್ಡ ಪಟ್ಟಣದಲ್ಲಿ ಪ್ರಯಾಣಿಕರಿಗೆ ಕೂರಲು ಬಸ್ ತಂಗುದಾಣವಿಲ್ಲ ಎನ್ನುವದು ವ್ಯಾಪ್ತಿಯ ಎಲ್ಲಾ ಜನಪ್ರತಿನಿಧಿಗಳು ತಂಗುದಾಣವಿಲ್ಲದ ಕಾರಣ ವೃದ್ಧರು, ರೋಗಿಗಳು ಅಂಗಡಿಗಳ ಸಂದಿಗೊಂದಿಗಳಲ್ಲಿ ನಿಲ್ಲಲು, ಕೂರಲು ಯತ್ನಿಸುತ್ತಿರುವ ದೃಶ್ಯ ಮನಕಲಕುವಂತಿದೆ. ಸಂಬಂಧಿಸಿದವರು ತಂಗುದಾಣ ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು. - ಕೆ.ಡಿ. ಸಂಪತ್, ನಾಪೆÇೀಕ್ಲು