ಗುಡ್ಡೆಹೊಸೂರು, ಜೂ. 11: ಇಲ್ಲಿಗೆ ಸಮೀಪದ ಅತ್ತೂರು ಗ್ರಾಮದಲ್ಲಿ ಕಳೆದ 48 ದಿನಗಳ ಹಿಂದೆ ನೂತನವಾಗಿ ನಿರ್ಮಿಸಿರುವÀ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪುನರ್‍ಪ್ರತಿಷ್ಠಾಪನ ಕಾರ್ಯವು 5 ದಿನಗಳ ಕಾಲ ವಿವಿಧ ಹೋಮ ಮತ್ತು ಪೂಜಾ ಕಾರ್ಯಗಳೊಂದಿಗೆ ನಡೆದವು. ಅಲ್ಲದೆ ಹೊಸದಾಗಿ ನಿರ್ಮಿಸಿರುವ ದೇವಸ್ಥಾನದ ಪಕ್ಕದಲ್ಲಿದ್ದ ಸುಮಾರು 5 ಅಡಿ ಉದ್ದದ ಶಿವಲಿಂಗವನ್ನು ಮಣ್ಣಿನಡಿಯಿಂದ ತೆಗೆದು ಕೇರಳದ ತಂತ್ರಿಗಳ ಸಮ್ಮುಖದಲ್ಲಿ ಪ್ರತಿಷ್ಠಾಪಿಸಲಾಗಿತ್ತು.
ದೇವಸ್ಥಾನದಲ್ಲಿ ಕಲಶಪೂಜೆ ಮತ್ತು ಹೋಮಗಳನ್ನು ನಡೆಸಲಾಯಿತು. ಈ ಸಂದರ್ಭ ದೇವಸ್ಥಾನ ಸಮಿತಿಯ ಅಧ್ಯಕ್ಷ ಉಗ್ರಾಣಿ ಮನೋಜ್ ಮತ್ತು ಸದಸ್ಯರು ಹಾಜರಿದ್ದರು. ಅಲ್ಲದೆ ಅತ್ತೂರಿನ ಸರ್ವ ಗ್ರಾಮಸ್ಥರು ಹಾಜರಿದ್ದರು ಈ ಸಂದರ್ಭ ಅನ್ನಸಂತರ್ಪಣೆ ನಡೆಯಿತು.
ತಿಂಗಳ ಪ್ರತಿ ಸೋಮವಾರ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯ ತನಕ ವಿಶೇಷ ಪೂಜೆ ನಡೆಯಲಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.