ಕೂಡಿಗೆ, ಜೂ. 11: ಸಮೀಪದ ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯದ ಮುಂಭಾಗದ ಕಾವೇರಿ ನದಿಗೆ ಮೀನುಗಾರಿಕೆ ಇಲಾಖೆಯ ವತಿಯಿಂದ ಮಹಶೀರ್ ಮೀನು ಮರಿಗಳನ್ನು ಬಿಡಲಾಯಿತು.

ಮೀನುಗಾರಿಕಾ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕಿ ಮಿಲನ ಭರತ್ ಮಾತನಾಡಿ, ಮಹಶೀರ್ ಮೀನು ಸಂತತಿಯನ್ನು ಹೆಚ್ಚಿಸುವ ಉದ್ದೇಶದಿಂದ ಕಣಿವೆಯ ಕಾವೇರಿ ನದಿಗೆ 7500 ಮಹಶೀರ್ ಮೀನು ಮರಿಗಳನ್ನು ನದಿಗೆ ಬಿಡಲಾಗಿದೆ. ನದಿ ಪಾತ್ರದ ಗ್ರಾಮಸ್ಥರು ನದಿಗೆ ಯಾವದೇ ರೀತಿಯ ವಿಷಕಾರಿ ವಸ್ತುಗಳನ್ನು ಹಾಗೂ ಸ್ಫೋಟಕಗಳನ್ನು ಸಿಡಿಸದೆ ಮೀನು ಮರಿಗಳ ಸಂರಕ್ಷಣೆಗೆ ಗ್ರಾಮಸ್ಥರು ಸಹಕರಿಸಬೇಕು ಎಂದು ಹೇಳಿದರು. ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್. ಸುರೇಶ್ ಹಾರಂಗಿ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸಚಿನ್, ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿಯ ಉಪಾಧ್ಯಕ್ಷ ಮಂಜುನಾಥ್, ಗೌರವಾಧ್ಯಕ್ಷ ಗಣೇಶ್, ಗೌರವ ಕಾರ್ಯದರ್ಶಿ ಮಾದವ, ಕಣಿವೆಯ ಸಾಹಿತಿ ಭಾರಧ್ವಜ್, ದೇವಾ ಲಯ ಸಮಿತಿಯ ನಿರ್ದೇಶಕರಾದ ಮಧು, ಕೃಷ್ಣಮೂರ್ತಿ, ಕಾರ್ತಿಕ್, ಪ್ರಶಾಂತ್, ಕಣಿವೆ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಗಣೇಶ್, ಕಮಲಾಕ್ಷಿ, ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.