ಬೆಂಗಳೂರು, ಜೂ. 11: ಕೊಡವ ಜನಾಂಗದ ಕೋವಿ ಹಕ್ಕಿನ ಬಗ್ಗೆ ಪ್ರಶ್ನಿಸಿ ಕ್ಯಾಪ್ಟನ್ ವೈ.ಕೆ ಚೇತನ್ ಅವರಿಂದ ಸಲ್ಲಿತವಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಎದುರಾಗಿ, ಸರ್ವ ಕೊಡವ ಸಮಾಜಗಳಿಂದ ಪ್ರತಿನಿಧಿತವಾಗಿರುವ ¥sóÉಡರೇಷನ್ ಆ¥sóï ಕೊಡವ ಸಮಾಜಾಸ್, ಬಾಳುಗೋಡು, ಇವರಿಂದ ಅಧಿಕಾರಸ್ಥರಾದ, ಬೆಂಗಳೂರಿನ ಕೊಡವ ಸಮಾಜದವರು, ಇತ್ತೀಚೆಗೆ ಇಂಪ್ಲೀಡಿಂಗ್ ಅರ್ಜಿಯನ್ನು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದರು.

ಈ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಇಂದು ವಿಷಯ ಪ್ರಸ್ತಾಪಿತಗೊಂಡು ವಿಚಾರಣೆ ನಡೆಯಿತು. ಕೊಡವ ಸಮಾಜದ ಪರವಾಗಿ ವಕೀಲರಾದ ಕು.ಕಾಳೇಂಗಡ ಸರೋಜಿನಿ ಮುತ್ತಣ್ಣ ವಾದಿಸಿ ಕೋವಿ ಹಕ್ಕಿನ ಪರವಾಗಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ರಾಜ್ಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಾಧೀಶರಾದ ಕೃಷ್ಣ ದೀಕ್ಷಿತ್ ಇವರುಗಳು ಕೊಡವ ಸಮಾಜದಿಂದ ಈ ಪ್ರಸ್ತಾಪದ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಲು ಅವಕಾಶ ಮಾಡಿಕೊಟ್ಟ್ಟಿದ್ದಾರೆ. ಮುಂದಿನ 4 ವಾರಗಳ ಒಳಗೆ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸುವಂತೆ ನಿರ್ದೇಶಿಸಿದ್ದಾರೆ.

ಈ ಸಂದರ್ಭ ಕೇಂದ್ರ ಸರಕಾರದ ಪರವಾಗಿ ವಕೀಲರಾದ ಪ್ರಮೋದ್ ಹಾಗೂ ದೂರುದಾರ ಚೇತನ್ ಪರವಾಗಿ ವಕೀಲರಾದ ವಿಕಾಸ್ ರೋಜಿಪುರ ಅವರು ಹಾಜರಿದ್ದರು.

ಈ ಮೊದಲು 2015 ರಲ್ಲಿಯೂ ಕೊಡವರ ಕೋವಿ ಹಕ್ಕಿ ಕುರಿತಾಗಿ ತಕರಾರು ಸಲ್ಲಿಸಿದ್ದಾಗ ¥sóÉಡರೇಷನ್ ಆಫ್ ಕೊಡವ ಸಮಾಜಾಸ್‍ರವರು ಬೆಂಗಳೂರು ಕೊಡವ ಸಮಾಜಕ್ಕೆ ಈ ವಿಷಯದ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲು ಒಪ್ಪಿಗೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಗೃಹ ಮಂತ್ರಿಗಳು ಹಾಗು ಕರ್ನಾಟಕದ ಬಹುತೇಕ ಮಂತ್ರಿಗಳನ್ನು ಸಂಪರ್ಕಿಸಿ ಈ ದೂರು ಸರಿಯಲ್ಲವೆಂದು ಮನವಿ ಸಲ್ಲಿಸಲಾಗಿತ್ತು

ಭಾರತೀಯ ಮದ್ದುಗುಂಡು ಕಾಯ್ದೆ 1959 ರ ವಿಭಾಗ 3 ಹಾಗು 4 ರ ಪ್ರಕಾರ ಕೇಂದ್ರ ಸರಕಾರದಿಂದ ಮಂಜೂರಾಗಿರತಕ್ಕ ಹಾಗು ಗುರುತಿಸಲಾಗಿರುವಂತೆ “ಇveಡಿಥಿ ಠಿeಡಿsoಟಿ oಜಿ ಅooಡಿg ಖಚಿಛಿe &amdiv; ಇveಡಿಥಿ ಎಚಿmmಚಿ ಖಿeಟಿuಡಿe ಊoಟಜeಡಿs iಟಿ ಅooಡಿg” ರಂತೆ ಪರವಾನಗಿಯನ್ನು ಹೊಂದಲು ಹಾಗೂ ಬಂದೂಕು ಮದ್ದು ಗುಂಡುಗಳನ್ನು ಹೊಂದಲು ಬದ್ದರಾಗಿರುತ್ತಾರೆ. ಎಂದು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲಾಗಿತ್ತು. ಇದೀಗ ಮತ್ತೆ ಕಾನೂನಾತ್ಮಕ ಮಟ್ಟದಲ್ಲಿ ಸಾÀರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿತವಾಗಿರುವದರಿಂದ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಎದುರಾಗಿ ಕೊಡವ ಸಮಾಜ ಬೆಂಗಳೂರು ಮತ್ತು ಫೆÉಡರೇಷನ್ ಆಫ್ ಕೊಡವ ಸಮಾಜಾಸ್ ಪರವಾಗಿ ಅಧಿಕಾರಸ್ಥರಾದ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರಾದ ಮಂಡೇಡ ರವಿ ಉತ್ತಪ್ಪ ಅವರು ಇಂಪ್ಲೀಡಿಂಗ್ ಅರ್ಜಿಗೆ ಸಹಿಹಾಕಿ ವಕೀಲರ ಮೂಲಕ ಸಲ್ಲಿಸಿದ್ದು ಇಂದು ಆ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.