ಮಡಿಕೇರಿ, ಜೂ. 11: ಸರ್ಕಾರಿ ಪ್ರೌಢಶಾಲೆ ಕಾನ್‍ಬೈಲ್‍ನ ಎಂಟರಿಂದ ಹತ್ತನೇ ತರಗತಿಯ ಮಕ್ಕಳಿಗೆ ಸ್ಥಳೀಯ ಮಂಜಿಕೆರೆಯ ಹಾಗೂ ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಮಂಜುನಾಥ್ ಮತ್ತು ಸ್ನೇಹಿತರ ಬಳಗ ನೋಟ್ ಪುಸ್ತಕಗಳು ಮತ್ತು ಬರವಣಿಗೆ ಸಾಧನಗಳನ್ನು ವಿತರಿಸಿದರು. ಕಳೆದ ಐದು ವರ್ಷಗಳಿಂದ ಪ್ರೋತ್ಸಾಹವನ್ನು ಮಕ್ಕಳಿಗೆ ನೀಡುತ್ತಿದ್ದಾರೆ. 2017-18 ನೇ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ ಶೇ. 92 ಫಲಿತಾಂಶ ದಾಖಲಿಸಿದ ಶಾಲೆಯ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಮಂಜುನಾಥ್ ಅಭಿನಂದನೆ ತಿಳಿಸಿದರು. ಸ್ನೇಹಿತರ ಬಳಗದ ಗ್ರಾಮ ಪಂಚಾಯಿತಿ ಸದಸ್ಯ ವಸಂತ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಮತ್ತು ಟಿ.ವಿ. ಯಿಂದ ದೂರವಿದ್ದಷ್ಟು ಕಲಿಕೆ ಉತ್ತಮವಾಗುತ್ತದೆ ಎಂದು ತಿಳಿಹೇಳಿದರು.

ಈ ಸಂದರ್ಭ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮಂಜಿಕೆರೆಯ ಅಂತೋಣಿ ಅವರನ್ನು ಸನ್ಮಾನಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಮಂಜೇಶ್ ಎಂ.ವಿ. ಸ್ನೇಹಿತರ ಬಳಗದ ರಾಮಚಂದ್ರ, ಉದಯಕುಮಾರ್, ಸುರೇಶ್, ಸೋಮಣ್ಣ, ಅಶೋಕ್ ಮತ್ತು ಶಿಕ್ಷಕ ವೃಂದ ಹಾಜರಿದ್ದರು.