ಸೋಮವಾರಪೇಟೆ, ಜೂ. 12: ಸಮೀಪದ ಓಎಲ್‍ವಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ನಡೆಯಿತು. ವಿದ್ಯಾರ್ಥಿಗಳಲ್ಲಿ ದೇಶದ ಚುನಾವಣೆಯ ಬಗ್ಗೆ ಮಾಹಿತಿ ಒದಗಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪ್ರೌಢಶಾಲೆಯ ವಿದ್ಯಾರ್ಥಿಗಳು ಮತದಾನದಲ್ಲಿ ಭಾಗವಹಿಸಿದ್ದರು. ಚುನಾವಣಾ ವ್ಯವಸ್ಥೆ, ಪ್ರಜಾಪ್ರಭುತ್ವದ ಬಗ್ಗೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಮುಖ್ಯ ಶಿಕ್ಷಕಿ ಸೆರೆನ್, ಶಿಕ್ಷಕರುಗಳಾದ ದಿನೇಶ್, ಪದ್ಮಿನಿ, ಮಿಂಚಿತ, ಶಿಲ್ಪ, ಅಶ್ವಿನಿ, ಲಿಂಗರಾಜು ಉಪಸ್ಥಿತರಿದ್ದರು.