ನಾಪೋಕ್ಲು, ಜೂ. 12: ಜಿಲ್ಲಾ ಗೊಲ್ಲ ಸಮಾಜದ ವಾರ್ಷಿಕ ಕ್ರೀಡೋತ್ಸವದ ಲೆಕ್ಕಪರಿಶೋಧನೆ ಇಲ್ಲಿನ ಸಂಘದ ಕಚೇರಿಯಲ್ಲಿ ಜರುಗಿತು. ಗೊಲ್ಲ ಸಮಾಜದ ಅಧ್ಯಕ್ಷ ಆಚೀರ ನಾಣಯ್ಯ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಲೆಕ್ಕ ಪತ್ರ ಹಾಗೂ ವಾರ್ಷಿಕ ಚಟುವಟಿಕೆಗಳ ಚರ್ಚೆ ನಡೆಸಲಾಯಿತು. ಕ್ರೀಡಾ ಸಮಿತಿ ಅಧ್ಯಕ್ಷ ತೊತ್ತಿಯಂಡ ರೇಣುಕ, ಕ್ರೀಡೋತ್ಸವ ಸಮಿತಿ ಅಧ್ಯಕ್ಷ ಕೂರಂಡ ಸಂತೋಷ್ ಹಾಗೂ ಕ್ರೀಡಾ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.