ಮಡಿಕೇರಿ, ಜೂ. 12: ಕಿಂಗ್ಸ್ ಆಫ್ ಕೂರ್ಗ್ ಡ್ಯಾನ್ಸ್ ತಂಡ ರಾಜ್ಯಮಟ್ಟಕ್ಕೆ ಆಯ್ಕೆಯಗಿದೆ. ಮೈಸೂರಿನಲ್ಲಿ ನಡೆದ ಮೈಸೂರ್ ಝೋನಲ್ ಸ್ಪೋಟ್ರ್ಸ್ ಡ್ಯಾನ್ಸ್ ಚಾಂಪಿಯನ್ ಶಿಪ್‍ನಲ್ಲಿ ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ತಂಡವು ಚಿನ್ನದ ಪದಕ ಗಳಿಸುವ ಮೂಲಕ ಮುಂದಿನ ತಿಂಗಳು ನಡೆಯಲಿರುವ ರಾಜ್ಯಮಟ್ಟದ ನೃತ್ಯ ಸ್ಪರ್ಧೆಗೆ ಆಯ್ಕೆ ಆಗಿದೆ. ಸೋಲೋ ವಿಭಾಗದಲ್ಲಿ ಮೋಕ್ಷಿತ್ ಮತ್ತು ಕಿರಣ್ ಕುಮಾರ್ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದಿದ್ದಾರೆ.